HEALTH TIPS

ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನ ಮಂದಿರಕ್ಕೆ ಕೇಂದ್ರೀಯ ವಿದ್ಯಾಲಯದ ಡಾ.ರಾಜೇಂದ್ರ ಭೇಟಿ


       ಬದಿಯಡ್ಕ: ಧಾರ್ಮಿಕ ಕ್ಷೇತ್ರಗಳು ನಮ್ಮ ಸಂಸ್ಕøತಿಯನ್ನು ಬಿಂಬಿಸುವ ಕೇಂದ್ರಗಳಾಗಿವೆ. ದೇವಸ್ಥಾನ, ಮಂದಿರಗಳಿಗೆ ಮಕ್ಕಳನ್ನು ಕೂಡಿಕೊಂಡು ಭೇಟಿನೀಡಿ ಪ್ರಾರ್ಥನೆಯನ್ನು ಸಲ್ಲಿಸುವ ಸಂಸ್ಕಾರವನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳುವುದರಿಂದ ಮುಂದಿನ ತಲೆಮಾರಿನ ಮಕ್ಕಳಲ್ಲಿ ಶ್ರದ್ಧೆ, ಭಕ್ತಿ, ಜ್ಞಾನದೊಂದಿಗೆ ಧಾರ್ಮಿಕ ಭಾವನೆ, ಸಂಸ್ಕøತಿಗೆ ಭದ್ರಬುನಾದಿಯಾಗಲಿದೆ ಎಂದು ಪೆರಿಯ ಕೇಂದ್ರೀಯ ವಿದ್ಯಾಲಯದ ಎಸೋಸಿಯೇಟ್ ಪ್ರಾಧ್ಯಾಪಕ  ಡಾ. ರಾಜೇಂದ್ರ ಪಿಲಾಂಕಟ್ಟೆ ಅಭಿಪ್ರಾಯಪಟ್ಟರು.
      ಮಾರ್ಪನಡ್ಕ ಜಯನಗರ ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಮಂದಿರದ ನಿರ್ಮಾಣ ಹಂತದಲ್ಲಿರುವ ಭೋಜನಶಾಲೆ ಮತ್ತು ಸಭಾಭವನದ ಕಾಮಗಾರಿ ಕೆಲಸಗಳನ್ನು ವೀಕ್ಷಿಸಿ ನಡೆದ ಸರಳ ಸಮಾರಂಭದಲ್ಲಿ ಅವರು ಮಾತನಾಡಿದರು.
     ಪ್ರಕೃತಿಯ ಶೋಷಣೆಯಿಂದ 21ನೇ ಶತಮಾನದಲ್ಲಿ ನಾವು ಹಲವಾರು ನಮಗರಿವಿಲ್ಲದ ಅನೇಕ ರೋಗಗಳನ್ನು ಬರಮಾಡಿಕೊಳ್ಳುತ್ತಿದ್ದೇವೆ. ಪ್ರಕೃತಿಯ ಸಮತೋಲನಕ್ಕೆ ಅರಣ್ಯಗಳು, ಪ್ರಾಣಿ, ಪಕ್ಷಿಗಳು ಹಾಗೂ ಇನ್ನಿತರ ಜೀವಿಗಳು ಕಾರಣವಾಗಿದೆ ಎಂಬುದನ್ನು ನಾವು ಅರಿತಿರಬೇಕು. ಪಾಶ್ಚಾತ್ಯ ಜೀವನಕ್ಕೆ ಒಗ್ಗಿಕೊಂಡಿರುವ ನಾವು ನಮ್ಮತನವನ್ನು ಬಿಟ್ಟು ಹೋದರೆ ಕೊರೊನಾದಂತಹ ಮಾರಕ ರೋಗಗಳಿಗೆ ತುತ್ತಾಗಲಿದ್ದೇವೆ. ನಮ್ಮ ಪುರಾತನ ಸಂಸ್ಕಾರ, ಸಂಸ್ಕøತಿಗೆ ಪೂರಕವಾದ ಚಟುವಟಿಗಳಿಂದ ದೇಶವು ಸುಭಿಕ್ಷವಾಗಲಿದೆ ಎಂದು ತಿಳಿಸಿದ ಅವರು ಬಾಲ್ಯಕಾಲದಲ್ಲಿ ಮಂದಿರದ ಪರಿಸರದೊಂದಿಗಿದ್ದ ತಮ್ಮ ಅನುಭವವನ್ನು ಹಂಚಿಕೊಂಡರು.
      ಗೌರವಾಧ್ಯಕ್ಷ ಬಾಬು ಮಣಿಯಾಣಿ ಜಯನಗರ ಅತಿಥಿಗಳನ್ನು ಶಾಲು ಹೊದೆಸಿ ಗೌರವಿಸಿದರು. ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾದ ಬಾಬು ಮಾಸ್ಟರ್ ಅಗಲ್ಪಾಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶ್ರೀ ಮಂದಿರದ ಕಾರ್ಯದರ್ಶಿ ರಾಜೇಶ್ ಮಾಸ್ಟರ್ ಅಗಲ್ಪಾಡಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರ್ ವಂದಿಸಿದರು. ಈ ಸಂಧರ್ಭದಲ್ಲಿ ಯಾದವ ಸೇವಾಸಂಘ ಅಗಲ್ಪಾಡಿಯ ಉಪಾಧ್ಯಕ್ಷರಾದ ರತ್ನಾಕರ ಕಲ್ಲಕಟ್ಟ, ಬಾಲಕೃಷ್ಣ ಮಣಿಯಾಣಿ ನಾರಂಪಾಡಿ, ಚಂದ್ರ ಪದ್ಮಾರು, ಶಿವರಾಮ ಪದ್ಮಾರು, ಅಚ್ಚುತ ನಾರಂಪಾಡಿ, ಸುಧಾಮ ಮಣಿಯಾಣಿ ಪದ್ಮಾರು, ಸುಶೀಲಾ ಪದ್ಮಾರು, ವೇದಿತಾ ಪದ್ಮಾರು, ವೇದಾಂತ್ ಪದ್ಮಾರು, ಶಿವರಾಮ ಮಣಿಯಾಣಿ ಚೇರ್ಕೂಡ್ಲು, ರಾಘವ ಚೆಟ್ಟಿಯಾರ್ ಮಾಯಿಪ್ಪಾಡಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries