ಮಂಜೇಶ್ವರ: ತಲಪಾಡಿ ಟೋಲ್ ಗೇಟ್ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಫೆಬ್ರವರಿ 29ರಂದು ಮಂಗಳೂರಿನಲ್ಲಿ ತುರ್ತು ಸಭೆ ಕರೆಯುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸೋಮವಾರ ಮಂಜೇಶ್ವರದ ಸರ್ವಪಕ್ಷಗಳ ನಿಯೋಗ ಸಂಸದರನ್ನು ಭೇಟಿ ಮಾಡಿ ತಲಪಾಡಿ ಟೋಲ್ ಗೇಟ್ ಸಮಸ್ಯೆ ಮನವರಿಕೆ ಮಾಡಿಕೊಡಲಾಯಿತು. ಸ್ಥಳೀಯರಿಗಿದ್ದ ಟೋಲ್ ವಿನಾಯಿತಿಯನ್ನು ಮುಂದುವರಿಸಬೇಕು, ತಲಪಾಡಿ ಸಿಟಿಬಸ್ಸುಗಳನ್ನು ಟೋಲ್ ಗೇಟ್ ಬಳಿ ನಿಲ್ಲಿಸಿ ಪ್ರಯಾಣಿಕರನ್ನು ಅರ್ಧ ದಾರಿಯಲ್ಲಿ ಇಳಿಸುವ ವ್ಯವಸ್ಥೆ ಕೊನೆಗೊಳ್ಳಬೇಕು ಮುಂತಾದ ಬೇಡಿಕೆಗಳನ್ನು ಸಂಸದರಿಗೆ ನೀಡಲಾಯಿತು. ಸಂಸದರನ್ನು ಭೇಟಿಯಾದ ನಿಯೋಗದಲ್ಲಿ ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಬ್ಲಾಕ್ ಪಂಚಾಯತಿ ಅಧ್ಯಕ್ಷ ಎಕೆಎಂ ಅಶ್ರಫ್, ಸದಸ್ಯ ಮುಸ್ತಫಾ ಉದ್ಯಾವರ, ರಾಜಕೀಯ ಪಕ್ಷಗಳ ಮುಖಂಡರಾದ ಹರೀಶ್ಚಂದ್ರ ಮಂಜೇಶ್ವರ, ದಯಾಕರ ಮಾಡ, ಯು.ಕೆ.ಸೈಫುಲ್ಲಾ ತಂಙಳ್, ಹನೀಫ್ ಪೆÇಸೋಟ್, ಅಬ್ದುಲ್ಲ ಗುಡ್ಡಕೇರಿ ಮುಂತಾದವರಿದ್ದರು.