ಕರಾಚಿ: ಪಾಕಿಸ್ತಾನದಲ್ಲಿ ಮೊಟ್ಟ ಮೊದಲ ಸಿವಿಲ್ ಜಡ್ಜ್ ಆಗಿ ಹಿಂದೂ ಯುವತಿಯೊಬ್ಬಳು ನೇಮಕವಾಗುವ ಮೂಲಕ ದಾಖಲೆ ನಿರ್ಮಿಸಿದ್ದಾಳೆ.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಸುಮನ್ ಪವನ್ ಬೋಡಾನಿ ತನ್ನ ಸಮುದಾಯದ ಮೊಟ್ಟ ಮೊದಲ ಜಡ್ಜ್ ಆಗಿ ನೇಮಕಗೊಂಡಿದ್ದಾರೆ. ಸುಮನ್ ಸಿಂಧ್ ಪ್ರಾಂತ್ಯಕ್ಕೆ ಸೇರಿರುವ ಶಹದಾದ್ ಕೋಟ್ ನಿವಾಸಿಯಾಗಿದ್ದಾರೆ. ಸಿವಿಲ್ ಜಡ್ಜ್ ಗಳ ಶ್ರೇಯಾಂಕ ಪಟ್ಟಿಯಲ್ಲಿ ಸುಮನ್ 54ನೇ ಸ್ಥಾನ ಪಡೆದುಕೊಂಡಿದ್ದಾರೆ.
ಸುಮನ್ ಅವರು ಭಾರತದ ಹೈದ್ರಾಬಾದ್ ನಲ್ಲಿ ಐಐಃ ಪದವಿ ಪಡೆದಿದ್ದು, ಬಳಿಕ ಕರಾಚಿಯಲ್ಲಿ ಎಲ್ ಎಲ್ ಬಿ ಪದವಿ ಪಡೆದುಕೊಂಡಿದ್ದರು. ಅಲ್ಲಿನ ಶಹೀದ್ ಜುಲ್ಫಿಕರ್ ಅಲಿ ಭುಟ್ಟೋ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಟೆಕ್ನಾಲಾಜಿಯಲ್ಲಿ ತಮ್ಮ ಎಲ್ ಎಲ್ ಎಂ ಪದವಿ ಮುಗಿಸಿದ್ದಾರೆ. ಬಳಿಕ ಲಾ ಸಂಸ್ಥೆಯೊಂದರಲ್ಲಿ ಎರಡು ವರ್ಷ ಪ್ರ್ಯಾಕ್ಟಿಸ್ ನಡೆಸಿದ್ದರು.