HEALTH TIPS

ಎಡನೀರಲ್ಲಿ ರಂಜಿಸಿದ ಪಾರ್ತಿಸುಬ್ಬನ ಪ್ರಸಂಗಗಳು


       ಬದಿಯಡ್ಕ: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಸಂಸ್ಥೆಯು ಕನ್ನಡ ವಿಭಾಗ ಭಾಷಾ ಅಧ್ಯಯನ ಕೇಂದ್ರ ಕಣ್ಣೂರು ವಿಶ್ವ ವಿದ್ಯಾನಿಲಯ ಕಾಸರಗೋಡು ಹಾಗೂ ಯಕ್ಷಗಾನ ಸಂಶೋಧನ ಕೇಂದ್ರ ಸರ್ಕಾರಿ ಕಾಲೇಜು ಕಾಸರಗೋಡು ಇವರ ಸಹಯೋಗದೊಂದಿಗೆ ಪಾರ್ತಿಸುಬ್ಬ- ಬದುಕು ಬರಹ ದ್ವಿದಿನ ವಿಚಾರ ಸಂಕಿರಣ ನಡೆಸಿದ್ದು ಅದರ ಅಂಗವಾಗಿ ಫೆಬ್ರವರಿ 13 ಹಾಗೂ 14 ರಂದು ಪಾರ್ತಿಸುಬ್ಬನ ಪ್ರಸಂಗಗಳಿಂದಾಯ್ದ ತಾಳಮದ್ದಳೆ ಹಾಗೂ ಯಕ್ಷಗಾನ ಬಯಲಾಟ ಪ್ರದರ್ಶನ ಶ್ರೀ ಎಡನೀರು ಮಠದಲ್ಲಿ ಏರ್ಪಡಿಸಲಾಗಿತ್ತು.
     ಬ್ರಹ್ಮ ಶ್ರೀ ಉಳಿಯತ್ತಾಯ ವಿಷ್ಣು ಆಸ್ರರು ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ ಎ ಹೆಗಡೆ, ಸದಸ್ಯ ಯೋಗೀಶರಾವ್ ಚಿಗುರುಪಾದೆ, ರಾಧಾಕೃಷ್ಣ ಕಲ್ಚಾರ್, ಪಾರ್ತಿಸುಬ್ಬ ಕಲಾಕ್ಷೇತ್ರದ ಮಾಜಿ ಅಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು, ಕಾರ್ಯದರ್ಶಿ ಸತೀಶ ಅಡಪ ಸಂಕಬೈಲು ಉಪಸ್ಥಿತರಿದ್ದರು. ಬಳಿಕ  ತೆಂಕುತಿಟ್ಟಿನ ಪ್ರಬುದ್ಧ ಕಲಾವಿದರಿಂದ ಪ್ರಸ್ತುತಿಗೊಂಡ ಪ್ರದರ್ಶನ ಜನಮನ ರಂಜಿಸುವಲ್ಲಿ ಯಶಸ್ವಿಯಾಗಿತ್ತು.
     ಮೊದಲನೇ ದಿನ ನಾಗರಾಜ ಪದಕಣ್ಣಾಯ ಅವರ ಸಂಯೋಜಕತ್ವದಲ್ಲಿ ಪಾರ್ತಿಸುಬ್ಬ ವಿರಚಿತ ವಾಲಿಮೋಕ್ಷ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಭಾಗವತಿಕೆಯಲ್ಲಿ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಎಡನೀರು ಮಠ ಹಾಗೂ ಸಿರಿಬಾಗಿಲು ರಾಮಕೃಷ್ಣ ಮಯ್ಯ ಕಾಣಿಸಿಕೊಂಡಿದ್ದು ಚೆಂಡೆಮದ್ದಳೆಯಲ್ಲಿ ಗೋಪಾಲಕೃಷ್ಣ ನಾವಡ ಮಧೂರು, ಲವ ಆಚಾರ್ಯ ಐಲ, ವರುಣ್ ಹೆಬ್ಬಾರ್ ಭಾಗವಹಿಸಿದ್ದರು. ಪಾತ್ರವರ್ಗದಲ್ಲಿ ಶ್ರೀರಾಮನಾಗಿ ಡಾ.ರಮಾನಂದ ಬನಾರಿ ಹಾಗೂ ನಾಗರಾಜ ಪದಕಣ್ಣಾಯ, ವಾಲಿ ರಾಧಾಕೃಷ್ಣ ಕಲ್ಚಾರ್, ಸುಗ್ರೀವ ಹರೀಶ ಬಳಂತಿಮೊಗರು, ತಾರೆ ರಾಜೇಂದ್ರ ಕಲ್ಲೂರಾಯ ವಹಿಸಿದ್ದರು.
      ಎರಡನೇ ದಿನ ವಿಠಲ ಭಟ್ ಮೊಗಸಾಲೆ ಯವರ ಸಂಯೋಜಕತ್ವದಲ್ಲಿ ನಡೆದ ಪಂಚವಟಿ ಯಕ್ಷಗಾನ ಬಯಲಾಟದಲ್ಲಿ ಹಿಮ್ಮೇಳದಲ್ಲಿ ಭಾಗವತ ದೇವಿಪ್ರಸಾದ ಆಳ್ವ ತಲಪಾಡಿ, ಚೆಂಡೆ ಲೋಹಿತ್ ಉಚ್ಚಿಲ, ಮದ್ದಳೆ ಮಯೂರ ನಾಯ್ಗ ಕೋಟೆಕಾರು, ಚಕ್ರತಾಳ ಹರೀಶ್ಚಂದ್ರ ನಾಯ್ಗ ಕೋಟೆಕಾರು ಹಾಗೂ ಪಾತ್ರವರ್ಗದಲ್ಲಿ ಶ್ರೀರಾಮ ತಾರಾನಾಥ ಬಲ್ಯಾಯ ವರ್ಕಾಡಿ, ಲಕ್ಷ್ಮಣ ಗುಂಡಿಮಜಲು ಗೋಪಾಲ ಭಟ್,  ಸೀತೆ ಕಿರಣ್ ಕುದ್ರೆಕೋಡ್ಲು, ಶೂರ್ಪನಖಿ ಉಬರಡ್ಕ ಉಮೇಶ ಶೆಟ್ಟಿ, ಮಾಯಾ ಶೂರ್ಪನಖಿ ಆಜ್ಞಾ ಸೋಹಂ, ಮುನಿಗಳು ಮಹಾಬಲೇಶ್ವರ ಭಟ್ ಭಾಗಮಂಡಲ ಹಾಗೂ ಇತರರು, ಖರಾಸುರ ಮಧುರಾಜ್ ಪಾಠಾಳಿ ಎಡನೀರು, ದೂಷಣ ಶ್ರೀಕೃಷ್ಣ ಭಟ್ ದೇವಕಾನ ನಿರ್ವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries