ಕಾಸರಗೋಡು: ಪಿಲಿಕುಂಜೆ ಶ್ರೀ ಐವರ್ ಭಗವತಿ ಕ್ಷೇತ್ರದಲ್ಲಿ ಕಳೆದ ಆರು ದಿನಗಳಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆದ ಕಳಿಯಾಟ ಮಹೋತ್ಸವ ಫೆ.29 ರಂದು ಮುಂಜಾನೆ ಭಂಡಾರ ನಿರ್ಗಮನದೊಂದಿಗೆ ಸಂಪನ್ನಗೊಂಡಿತು.
ಉತ್ಸವದ ಕೊನೆಯ ದಿನವಾದ ಶುಕ್ರವಾರ ಕಾಳಪುಲಿಯನ್ ದೈವ, ಕಾರ್ಯಕ್ಕಾರನ್, ಪುಲಿಕಂಡನ್ ದೈವ, ವೇಟ್ಟಕೊರುಮಗನ್ ದೈವ, ಮಂತ್ರ ಮೂರ್ತಿ ದೈವ, ಪುಲ್ಲೂರಾಳಿ ದೈವ, ವಿಷ್ಣುಮೂರ್ತಿ ದೈವ, ಪುಲ್ಲೂರ್ಣನ್ ದೈವ(ಹೂಮುಡಿ), ಪಿಲಿಕುಂಜೆ ಶ್ರೀ ಜಗದಂಬಾ ದೇವಿ ಶ್ರೀ ಕ್ಷೇತ್ರ ಭಜನಾ ಸಂಘದವರಿಂದ ಭಜನೆ, ಪುಷ್ಪಾರ್ಚನೆ, ಹೆಣ್ಮಕ್ಕಳಿಗೆ ಚಪ್ಪರ ಮುಹೂರ್ತ, ಬಲಿಯುತ್ಸವ, ಬಿಂಬ ದರ್ಶನ, ಪ್ರಸಾದ ವಿತರಣೆ, ಕೂಟ್ಟ ಅಡಯಾಳಂ, ಪುಲ್ಲೂರ್ಣನ್ ದೈವದ ಹೂಮುಡಿ ಶ್ರದ್ಧಾ ಭಕ್ತಿಯೊಂದಿಗೆ ಅವರೋಹಣಗೈದು ಕಾರ್ನವರ್ ಕಾಳಿಮಾಡದಲ್ಲಿ ಸಮರ್ಪಿಸುವುದರೊಂದಿಗೆ ಉತ್ಸವ ಮುಕ್ತಾಯಗೊಂಡಿತು.