ಮಂಜೇಶ್ವರ: ಯೇಸು ಕ್ರಿಸ್ತರ ತಿರುಹೃದಯದ ದೇವಾಲಯ ವರ್ಕಾಡಿಯಲ್ಲಿ ಫೆ.23 ರಂದು 29 ನೇ ವರ್ಷದ ವೆಲ್ಲಂಕಣಿ ಮಾತೆಯ ವಾರ್ಷಿಕ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬೆಳಗ್ಗೆ 10 ಕ್ಕೆ ಮಾತಾ ಭಕ್ತರಿಗೆ ನಮನ, 10.30 ಕ್ಕೆ ಮಹೋತ್ಸವ ಪೂಜೆ, ದಿವ್ಯ ಬಲಿ ಪೂಜೆಯ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿರುವುದು.
ಯೇಸು ಕ್ರಿಸ್ತರ ತಿರುಹೃದಯದ ದೇವಾಲಯ ವರ್ಕಾಡಿಯ ಪಾಲನಾ ಮಂಡಳಿ ಹಾಗು ಕೆಥೋಲಿಕ್ ಸಭಾ ವರ್ಕಾಡಿ ಘಟಕದ ವತಿಯಿಂದ ಸಂಜೆ 6.30 ರಿಂದ ವರ್ಕಾಡಿ ಇಗರ್ಜಿ ವಠಾರದಲ್ಲಿ ಸಾಂಸ್ಕøತಿಕ ಸಂಜೆ ನಡೆಯಲಿದೆ. ಮಸ್ಕಿರಿ ಕುಡ್ಲ ಅವರಿಂದ `ತೆಲಿಕೆ ಬಂಜಿ ನಿಲಿಕೆ' ಕಾರ್ಯಕ್ರಮ ಜರಗಲಿದೆ.