ಮುಳ್ಳೇರಿಯ: ಸರೋವರ ದೇಗುಲ ಅನಂತಪುರದ ಶ್ರೀ ಅನಂತಪದ್ಮನಾಭ ಕ್ಷೇತ್ರ ಪರಿಸರದಲ್ಲಿ ಏಪ್ರಿಲ್ 10 ರಿಂದ 12 ರ ವರೆಗೆ ನಡೆಯುವ ಬೃಹತ್ ಕನ್ನಡ ಸಿರಿ ಸಮ್ಮೇಳನದ ಯಶಸ್ಸಿಗಾಗಿ ಫೆ.29 ಶನಿವಾರ ಮಧ್ಯಾಹ್ನ 3 ರಿಂದ ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಪರಿಸರದಲ್ಲಿ ಬಂದಡ್ಕ ವಲಯ ಕನ್ನಡಿಗರ ಪೂರ್ವಭಾವಿ ಸಭೆ ನಡೆಯಲಿದೆ.
ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಬೇಕೆಂದು ಬಂದಡ್ಕ ಕನ್ನಡ ಸಂಘದ ಪದಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.