ಬದಿಯಡ್ಕ: ಬೇಳ ಕುಮಾರಮಂಗಲ ಶ್ರೀ ಕುಮಾರಸ್ವಾಮಿ ವಿದ್ಯಾಮಂದಿರದ ಶಾಲಾ ವರ್ಧಂತ್ಯುತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ನಡೆಯಿತು. ಶಾಲಾ ಸಂಚಾಲಕ ಶೇಂತಾರು ನಾರಾಯಣ ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಿನ್‍ಫ್ರಾದ ಇಕೋಬ್ಯಾಗ್ ಮಾಲಕ ಸತೀಶ್ ಕೆ. ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು. ಕಾಸರಗೋಡು ಬ್ಲಾಕ್ ಪಂಚಾಯಿತಿ ಸದಸ್ಯ ಅವಿನಾಶ್ ರೈ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಮೇಶ ಕಳೇರಿ ಶುಭ ಹಾರೈಸಿದರು. ಮಾತೃಮಂಡಳಿಯ ಅಧ್ಯಕ್ಷೆ ಸವಿತಾ, ಪ್ರಧಾನ ಅಧ್ಯಾಪಿಕೆ ಇಂದಿರಾ ಉಪಸ್ಥಿತರಿದ್ದರು. ಅಧ್ಯಾಪಿಕೆಯರಾದ ಪ್ರೀತ ಸ್ವಾಗತಿಸಿ, ಅನಿತ ವಂದಿಸಿದರು. ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ಅಧ್ಯಾಪಿಕೆಯರಾದ ಅಶ್ವಿನಿ ಹಾಗೂ ಸುಕನ್ಯಾ ನಿರೂಪಿಸಿದರು.
ಬೇಳ ಶ್ರೀ ಕುಮಾರಸ್ವಾಮಿ ವಿದ್ಯಾಮಂದಿರದ ವರ್ಧಂತ್ಯುತ್ಸವ
0
ಫೆಬ್ರವರಿ 08, 2020