ಮಧೂರು: ಕೂಡ್ಲು ಇಲ್ಲಿಗೆ ಸಮೀಪದ ಅತೀ ಪುರಾತನ ಕ್ಷೇತ್ರವಾದ ಶಿವಮಂಗಲ ಶ್ರೀ ಸದಾಶಿವ ಕ್ಷೇತ್ರದ ಜೀರ್ಣೋದ್ಧಾರ ನಡೆಸುವ ನಿಟ್ಟಿನಲ್ಲಿ ಈಗಾಗಲೆ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಗಿದ್ದು, ಜೀರ್ಣೋದ್ಧಾರ ಕಾರ್ಯಗಳಲ್ಲಿ ಮಹಿಳೆಯರನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಪ್ರತ್ಯೇಕವಾದ ಶಿವಮಂಗಲ ಶ್ರೀ ಸದಾಶಿವ ಮಹಿಳಾ ಸಮಿತಿಯನ್ನು ರಚಿಸಲಾಯಿತು.
ಇದರ ಅಂಗವಾಗಿ ನಡೆದ ಸಭೆಯ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯೋಪದ್ಯಾಯಿನಿ ಮೋಹಿನಿ ರಾವ್ ವಹಿಸಿದ್ದು ಮಾತೃ ಸೇವಿಕಾ ಸಂಸ್ಥೆಯ ಸವಿತಾ ಟೀಚರ್ ಸಭೆಯನ್ನು ಉದ್ಘಾಟಿಸಿದರು. ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಸದಸ್ಯೆ ಲೀಲ, ಮಧೂರು ಗ್ರಾಮ ಪಂಚಾಯತ್ ಸದಸ್ಯೆ ಪುಷ್ಪಾ, ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯೆ ಯಶೋಧ, ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಹಿಳಾ ಸಂಘದ ಅಧ್ಯಕ್ಷೆ ಉಮಾ, ಅನ್ನಪೂರ್ಣೇಶ್ವರಿ ಮಹಿಳಾ ಸಂಘದ ರೇಣುಕಾ, ಶಿವಪಾರ್ವತಿ ಮಹಿಳಾ ಸಂಘದ ಅಧ್ಯಕ್ಷೆ ಚಂದ್ರಕಲಾ, ಕೂಡ್ಲು ಕ್ಷೇತ್ರಗಳ ಅನುವಂಶಿಕ ಮೊಕ್ತೇಸರ ಕೆ.ಜಿ.ಶಾನುಭೋಗ್ ಸಮಾರಂಭಕ್ಕೆ ಶುಭ ಹಾರೈಸಿದರು.
ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ರಕ್ಷಾಧಿಕಾರಿಯಾಗಿ ಮೋಹಿನಿ ರಾವ್, ಗೌರವಾಧ್ಯಕ್ಷರಾಗಿ ಲೀಲ ಗುವೆತಡ್ಕ, ಅಧ್ಯಕ್ಷರಾಗಿ ಸರಳಾ ನಾಯ್ಕ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೀಳಾ ಕೂಡ್ಲು, ಕೋಶಾಧಿಕಾರಿಯಾಗಿ ಶಿಲ್ಪಾ ಆಯ್ಕೆ ಗೊಂಡರು. ಶಿವಮಂಗಲ ಶ್ರೀ ಸದಾಶಿವ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಿರಣ್ ಪ್ರಸಾದ್ ಕೂಡ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಮಂಗಲ ಕ್ಷೇತ್ರದ ಅರ್ಚಕ ನಾಗೇಂದ್ರ ಭಟ್, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ವೇಣುಗೋಪಾಲ ಅಡಿಗ, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ, ರವಿರಾಜ ಅಡಿಗ, ನಿವೃತ್ತ ಪೆÇಲೀಸ್ ಕೃಷ್ಣ ಮುಂತಾದವರು ಉಪಸ್ಥಿತರಿದ್ದರು. ಹೇಮಲತ ಸ್ವಾಗತಿಸಿ, ಶಿಲ್ಪಾ ವಂದಿಸಿದರು. ಸುಧಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು.