ಕುಂಬಳೆ: ಕಾಸರಗೋಡು ಜಿಲ್ಲಾ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಬಿ.ಸುಬ್ಬಯ್ಯ ರೈ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಕುಂಬಳೆ ಸಿಟಿ ಹಾಲ್‍ನಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಇತ್ತೀಚೆಗೆ ಜರಗಿದ ಪ್ರತಿನಿಧಿಗಳ ಸಭೆಯಲ್ಲಿ ಪಿ.ಸುರೇಶ್ ಕುಮಾರ್ ಶೆಟ್ಟಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ನೂತನ ಸಾಲಿಗೆ ಅಧ್ಯಕ್ಷರಾಗಿ ನ್ಯಾಯವಾದಿ ಬಿ.ಸುಬ್ಬಯ್ಯ ರೈ, ಉಪಾಧ್ಯಕ್ಷರುಗಳಾಗಿ ಚಂದ್ರಹಾಸ ರೈ ಪೆರಡಾಲಗುತ್ತು, ಶ್ಯಾಮಲಾ ಎಂ.ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾಗಿ ಕಿರಣ್ ಮಾಡ ಆದೂರು, ಗೋಪಾಲಕೃಷ್ಣ ಶೆಟ್ಟಿ ಕುಂಬಳೆ ಹಾಗು ಕೋಶಾಧಿಕಾರಿಯಾಗಿ ಚಿದಾನಂದ ಆಳ್ವ ಮಂಜಕೊಟ್ಟಿಗೆ ಅವರನ್ನು ಆರಿಸಲಾಯಿತು.
ನೂತನ ಅಧ್ಯಕ್ಷರಿಗೆ ಹಾಗು ಪದಾಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ ನಿಕಟಪೂರ್ವ ಅಧ್ಯಕ್ಷ ನ್ಯಾಯವಾದಿ ಎ.ಸದಾನಂದ ರೈ ಶುಭಹಾರೈಸಿ ಮಾತನಾಡಿದರು. ಸಮಾಜ ಬಾಂಧವರ ಸರ್ವತೋಮುಖ ಅಭ್ಯುದಯಕ್ಕೆ ತನ್ನ ಶಕ್ತಿ ಮೀರಿ ಕಾರ್ಯ ನಿರ್ವಹಿಸುವುದಾಗಿ ನಿಯುಕ್ತ ಅಧ್ಯಕ್ಷ ಬಿ.ಸುಬ್ಬಯ್ಯ ರೈ ಹೇಳಿದರು.