ಕಾಸರಗೋಡು: ನಾಡಿನಲ್ಲಿ ಆರೋಗ್ಯ ಜಾಗೃತಿ ಖಚಿತ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಒಗ್ಗಟ್ಟಿನ ಚಟುವಟಿಕೆ ಅಗತ್ಯವಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯಪಟ್ಟರು.
ಕಾಞಂಗಾಡ್ ವ್ಯಾಪಾರಭವನದಲ್ಲಿ ಶನಿವಾರ ನಡೆದ ಆರೋಗ್ಯ ಜಾಗೃತಿಯ ಯೋಜನೆ "ಆದ್ರ್ರಾ"ದ ಜನಪರ ಶಿಬಿರದ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಶನಿವಾರ ನಡೆಸಿ ಅವರು ಮಾತನಾಡಿದರು.
ನಿಫಾ, ಕೊರೋನಾದಂಥಾ ಮಾರಕ ರೋಗಗಳು ಹಬ್ಬುವ ವೇಳೆ ಪ್ರತಿರೋಧ ನಡೆಸುವಲ್ಲಿ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗಿದೆ. ತ್ಯಾಜ್ಯ ಸಂಸ್ಕರಣೆ, ಸಂಪೂರ್ಣ ಶುಚಿತ್ವ ಸಹಿತ ಅಂಟುರೋಗ ವಿರುದ್ಧ ಚಟುವಟಿಕೆಗಳಲ್ಲೂ ರಾಜ್ಯ ಮುಂದಿದೆ. ಮುಂದಿನ ಮೂರು ತಿಂಗಳಲ್ಲಿ ಬೇಸಗೆಯ ಧಗೆ ಹೆಚ್ಚಳದೊಂದಿಗೆ ಅಂಟುರೋಗಗಳ ಹಾವಳಿಯ ಭೀತಿಯೂ ಇದೆ. ಈ ನಿಟ್ಟಿನಲ್ಲಿ ನಡೆಸುವ ಪ್ರತಿರೋಧ ಚಟುವಟಿಕೆಗಳಿಗೆ ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರೂ ಹೆಗಲು ನೀಡಬೇಕು. ಗ್ರಾಮಪಂಚಾಯತ್ ಮಟ್ಟದಲ್ಲೂ ಜಾಗೃತಿ ಮೂಡಬೇಕು ಎಂದವರು ನುಡಿದರು.
ಕಾರಡ್ಕ ಗ್ರಾಮಪಂಚಾಯತ್ ಅಧ್ಯಕ್ಷೆ ಓಮನಾ ರಾಮಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಕೋಡೋ-ಬೇಳೂರು ಗ್ರಾಮಪಂಚಾಯತ್ ಅಧ್ಯಕ್ಷ ಸಿ.ಕುಂuಟಿಜeಜಿiಟಿeಜಕಣ್ಣನ್, ಪುಲ್ಲೂರು-ಪೆರಿಯ ಗ್ರಾಮಪಂಚಾಯತ್ ಅಧ್ಯಕ್ಷೆ ಶಾರದಾ ಎಸ್.ನಾಯರ್, ಕಾಞಂಗಾಡ್ ನಗರಸಭೆ ಸ್ಥಾಯೀ ಸಮಿತಿ ಅಧ್ಯಕ್ಷ ಮುಹಮ್ಮದ್ ಮುರಿಯಾನಾವಿ, ಪಡನ್ನ ಗ್ರಾಮಪಂಚಾಯತ್ ಅಧ್ಯಕ್ಷ ಪಿ.ಸಿ.ಫೌಸಿಯಾ, ಪ್ರಧಾನ ವೈದ್ಯಧಿಕಾರಿ(ಐ.ಎಸ್.ಎಂ.) ಡಾ.ವಿಜಯಕುಮಾರ್, ಜಿಲ್ಲಾ ವ್ಯಧ್ಯಾಧಿಕಾರಿ(ಹೋಮಿಯೋ) ಡಾ.ರಾಮ ಸುಬ್ರಹ್ಮಣ್ಯಂ, ಶುಚಿತ್ವ ಮಿಷನ್ ಜಿಲ್ಲಾ ಸಂಚಾಲಕಿ ಎ.ಲಕ್ಷ್ಮಿ, ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕಿ ಕೆ.ವಿ.ಪುಷ್ಪಾ, ಪಶುಸಂಗೋಪನೆ ಜಿಲ್ಲಾ ಅಧಿಕಾರಿ ಡಾ.ಟಿ.ಇ.ಉಣ್ಣಿಕೃಷ್ಣನ್, ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಕೇಶವ್, ಜಿಲ್ಲಾ ಪರಶಿಷ್ಟ ಜಾತಿ ಕಲ್ಯಾಣ ಅಧಿಕಾರಿ ಎಸ್.ಮೀನಾರಾಣಿ, ಮಾಸ್ ಮೀಡಿಯಾ ಅಧಿಕಾರಿ ಸಯನಾ, ವಿವಿಧ ಗ್ರಾಮಪಂಚಾಯತ್ ಕಾರ್ಯದರ್ಶಿಗಳು, ವಿವಿಧ ಇಲಾಖೆಗಳ ಸಿಬ್ಬಂದಿ, ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ನೌಕರರು ಮೊದಲಾದವರು ಉಪಸ್ಥಿತರಿದ್ದರು. ಪ್ರಭಾರ ಜಿಲ್ಲಾ ವೈಧ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಸ್ವಾಗತಿಸಿದರು. ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಎ.ಟಿ.ಮನೋಜ್ ವಂದಿಸಿದರು.