ಪೆರ್ಲ:ಪಡ್ರೆ ವಾಣೀನಗರ ಹೈಯರ್ ಸೆಕೆಂಡರಿ ಶಾಲೆಯ ಸೌಹಾರ್ದ ಕ್ಲಬ್ ವತಿಯಿಂದ ಅಗ್ನಿ ಸುರಕ್ಷತೆ, ತುರ್ತು ನಿರ್ವಹಣೆ ಹಾಗೂ ವಿಪತ್ತು ಸುರಕ್ಷತಾ ತರಗತಿ, ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾಸರಗೋಡು ಫೈರ್ ಆಂಡ್ ಸೇಫ್ಟಿ ಹಿರಿಯ ಅಧಿಕಾರಿ ಮನೋಹರನ್ ಕೆ.ವಿ.ತರಗತಿ ನೀಡಿ ಮಾತನಾಡಿ, ಬೆಂಕಿ ಅವಘಡಗಳು ಹೆಚ್ಚಾಗಿ ಅರಿವಿನ ಕೊರತೆಯಿಂದ ಉಂಟಾಗುತ್ತದೆ.ಅವಘಡಗಳು ಸಂಭವಿಸಿದಾಗ ಜೀವ ರಕ್ಷಣೆ ಹಾಗೂ ಆತ್ಮ ರಕ್ಷಣೆಗೆ ಮೊದಲ ಪ್ರಾಶಸ್ತ್ಯ ನೀಡಬೇಕು.ಖಾಸಗಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಕಚೇರಿಗಳಲ್ಲಿ ಅಳವಡಿಸಿರುವ ಕಾರ್ಬೋ ಹೈಡ್ರೇಟ್ ಸಪೆಕ್ಸ್ ಬಳಸಿ ಬೆಂಕಿ ಆರಿಸುವಿಕೆ ಕ್ರಮ ಕೈಗೊಳ್ಳಬೇಕು.ಖಾಸಗಿ, ಸಾರ್ವಜನಿಕ ವಲಯದಲ್ಲಿ ಅಡುಗೆ ಅನಿಲ ಸೋರಿಕೆ, ವಿದ್ಯುತ್ ಎಲೆಕ್ಟ್ರಿಕ್ ಶಾರ್ಟ್ ಸಕ್ರ್ಯೂಟ್, ಕಟ್ಟಡಗ, ಗಿಡ ಮರಗಳಿಗೆ ಬೆಂಕಿ ತಗುಲಿದಾಗ ಅಗ್ನಿ ಶಾಮಕ ದಳದ ತುರ್ತು ಸೇವೆ ಪಡೆಯಲು ನಂ.101ಕ್ಕೆ ಕರೆ ಮಾಡಬೇಕು. ಬೆಂಕಿ ಯಾವ ರೀತಿಯಲ್ಲಿ ಪಸರಿಸುತ್ತದೆ, ಅದನ್ನು ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಲೈಡ್ ಶೋ ಮೂಲಕ ಮನ ಮುಟ್ಟುವಂತೆ ವಿವರಿಸಿದರು. ಬೆಂಕಿ ಅವಘಡ, ಗ್ಯಾಸ್ ಸ್ಟವ್ ಮೂಲದ ಅಗ್ನಿ ದುರಂತವನ್ನು ಸಾಮಾನ್ಯ ಗೋಣಿ ಚೀಲದ ಮೂಲಕ ಯಾವ ರೀತಿಯಲ್ಲಿ ತಡೆಯಬಹುದು.ಬೆಂಕಿ ಅವಘಡದಲ್ಲಿ ಗಾಯಗೊಂಡವರಿಗೆ, ನೀರಿನಲ್ಲಿ ಬಿದ್ದವರಿಗೆ ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.
ಪ್ರಾಂಶುಪಾಲ ಗಂಗಾಧರ ಕೆ.ಅಧ್ಯಕ್ಷತೆ ವಹಿಸಿದರು.ಮುಖ್ಯ ಶಿಕ್ಷಕ ವಾಸುದೇವ ನಾಯಕ್ ಶುಭ ಹಾರೈಸಿದರು.ಶಿಕ್ಷಕ ದಿನೇಶ್ ಸ್ವಾಗತಿಸಿ, ಉಷಾಕುಮಾರಿ ವಂದಿಸಿದರು.