ಪೆರ್ಲ: ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತೀ)ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಹಾನ್ಯಾಸಪೂರ್ವಕ ಮಹಾರುದ್ರಾಭಿಷೇಕ ಶನಿವಾರ ರಾತ್ರಿ ನಡೆಯಿತು. 200ಕ್ಕೂ ಹೆಚ್ಚು ಮಂದಿ ಪುರೋಹಿತರು ಮಂತ್ರೋಚ್ಛಾರಣೆ ಸಹಿತ ಶಿವಲಿಂಗಕ್ಕೆ ಅಭಿಷೇಕ ನಡೆಸುವ ಮೂಲಕ ಮಹಾರುದ್ರಾಭಿಷೇಕ ನಡೆಸಿಕೊಟ್ಟರು. ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಳ್ಳಲಾದ ಮಹಾರುದ್ರಯಾಗದ ಪೂರ್ವಭಾವಿಯಾಗಿ ಮಹಾರುದ್ರಾಭಿಷೇಕ ನಡೆಯಿತು.
ಬೆಂಗಳೂರು ಗಿರಿನಗರ ಶ್ರೀಶಂಕರ ವೇದಪಾಠಶಾಲೆಯ ಪವಮಾನಶ್ರೀ ವೇದಮೂರ್ತಿ ಸಂಪಿಗೆ ಶ್ರೀನಿವಾಸ ಮೂರ್ತಿ ಅವರ ನೇತೃತ್ವದಲ್ಲಿ ಮಹಾರುದ್ರಾಭಿಷೇಕ ನಡೆಯಿತು. ಭಾನುವಾರ ಬೆಳಗ್ಗೆ 108ಕಾಯಿ ಗಣಪತಿ ಹವನ, ಮಹಾರುದ್ರಯಾಗ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಪೆರ್ಲದ ಶಿವಾಂಜಲಿ ನೃತ್ಯಕಲಾಕೇಂದ್ರದ ನಿರ್ದೇಶಕಿ ವಿದುಷಿ ಕಾವ್ಯಾಭಟ್ ಮತ್ತು ಶಿಷ್ಯವೃಂದದಿಂದ ಭರತನಾಟ್ಯ-ಜಾನಪದ ನೃತ್ಯ ಕಾರ್ಯಕ್ರಮ ಜರುಗಿತು.
ಕಜಂಬು, ನೇಮೋತ್ಸವ:
ನಿನ್ನೆ (3ರಂದು) ಬೆಳಗ್ಗೆ 6ಕ್ಕೆ ಚಂಡಿಕಾ ಹವನ, ತುಲಾಭಾರ, ಸಾಯಂಕಾಲ 6ಕ್ಕೆ ಕಜಂಬು ಉತ್ಸವ, ರಾತ್ರಿ 8ಕ್ಕೆ ಶ್ರೀ ಉಳ್ಳಾಲ್ತೀ ನೆಮೋತ್ಸವ ನಡೆಯಿತು.
ಇಂದು ಫೆ. 4ರಂದು ಬೆಳಗ್ಗೆ 10ಕ್ಕೆ ಸತ್ಯನಾರಾಯಣ ಪೂಜೆ, 7.30ಕ್ಕೆ ಸುಡುಮದ್ದು ಪ್ರದರ್ಶನ, ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ತೆಗೆಯುವುದು, ಶ್ರೀ ದೈವದ ತೊಡಙಳ್, ಕುಳಿಚ್ಚಾಟ, ರಾತ್ರಿ 8.30ಕ್ಕೆ ನೃತ್ಯ ವೈವಿಧ್ಯ ನಡೆಯುವುದು. ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಮತ್ತು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.