ಪೆರ್ಲ: ಮಾತಾ-ಪಿತೃಗಳ, ವಿದ್ಯೆ ಕಲಿಸಿದ ಗುರುಗಳ ಋಣಗಳನ್ನು ತೀರಿಸಲು ಸಾಧ್ಯವಿಲ್ಲ ಎಂಬ ಹಿತೋಕ್ತಿಯ ಸಂದೇಶ ಎಂದಿಗೂ ಮಹತ್ವದ್ದಾಗಿದೆ. ವಿದ್ಯೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವನ್ನು ರೂಪಿಸುವಲ್ಲಿ ಮತ್ತು ಬದುಕಿನಲ್ಲಿ ಸಾರ್ಥಕತೆ ಕಂಡುಕೊಳ್ಳುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ ಎಂದು ನಿವೃತ್ತ ಸಂಸ್ಕøತ ಶಿಕ್ಷಕ ಮೊಳಕ್ಕಾಲು ದಿ. ರಾಮಚಂದ್ರ ಭಟ್ ಅವರ ಪುತ್ರ ಸತ್ಯಶಂಕರ ಭಟ್ ಅವರು ತಿಳಿಸಿದರು.
ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ತಮ್ಮ ತಂದೆಯ ಸ್ಮರಣಾರ್ಥ ನಿರ್ಮಿಸಲಾದ ನೂತನ ಭೋಜನ ಶಾಲೆಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕ್ ಮಂಗಳೂರಿನ ಪ್ರಧಾನ ಪ್ರಬಂಧಕ ಮಹಾಲಿಂಗೇಶ್ವರ ಭಟ್, ಶಾಲಾ ಪ್ರಬಂಧಕ ಪಿ.ಯಸ್ ವಿಶ್ವಾಮಿತ್ರ, ಅಧ್ಯಕ್ಷ ಬಿ.ಜಿ ರಾಮ ಭಟ್, ಶ್ರೀವಿದ್ಯಾರಣ್ಯ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರುಗಳಾದ ಸದಾಶಿವ ಭಟ್ ಹರಿನಿಲಯ, ವೆಂಕಟರಾಜ ಮಿತ್ರ, ಮುಖ್ಯ ಶಿಕ್ಷಕರಾದ ಬಿ.ರಾಜೇಂದ್ರ ಉಪಸ್ಥಿತರಿದ್ದರು. ಆಡಳಿತ ಸಮಿತಿ ಸದಸ್ಯರು,ಅಧ್ಯಾಪಕ ಸಿಬ್ಬಂದಿ ವರ್ಗ, ರಕ್ಷಕ ಶಿಕ್ಷಕ ಸಂಘದ ಸದಸ್ಯರು, ವಿದ್ಯಾಭಿಮಾನಿಗಳು,ವಿದ್ಯಾರ್ಥಿಗಳು ಭಾಗವಹಿಸಿದರು.