ಕಾಸರಗೋಡು: ವಿದ್ಯಾನಗರದ ಚಿನ್ಮಯ ವಿದ್ಯಾಲಯದಲ್ಲಿ ಪ್ರಾತ:ಕಾಲ ಸೂರ್ಯೋದಯದ ಪುಣ್ಯ ಕಾಲದಲ್ಲಿ ಸಾವಿರಾರು ಬಕ್ತರ ಉಪಸ್ಥಿತಿಯಲ್ಲಿ ಗಾಯತ್ರಿ ಹವನವನ್ನು ನಡೆಸಲಾಯಿತು.
ಬೃಹದ್ಗಾತ್ರದ ಹೋಮ ಕುಂಡವಲ್ಲದೆ ಇತರ ಹಲವಾರು ಹೋಮ ಕುಂಡಗಳಲ್ಲಿ ಸಮಿತ್ತುಗಳನ್ನು ಸಮರ್ಪಿಸಿ ಹೋಮದ ವಿದೀ ವಿದನಗಳನ್ನು ನಡೆಸಲಾಯಿತು. `ಗಾಯಂತಂ ತ್ರಾಯತೇ ಇದಿ ಗಾಯತ್ರಿ' ಮಹರ್ಷಿ ವಿಶ್ವಾಮಿತ್ರನ ಜ್ಞಾನ ದೃಷ್ಟಿಯಲ್ಲಿ ಉದ್ಭವಿಸಿದ ಗಾಯತ್ರಿ ಮಂತ್ರ ನಮ್ಮ ಬೌದ್ಧಿಕತೆಯನ್ನು ಉದ್ಭೋ„ಸುವ ಅತ್ಯಂತ ಪರಿಪಾವನವೂ ಶಕ್ತವೂ ಆಗಿರುವ ಮಂತ್ರವಾಗಿದೆ.
ಹವನದ ಮುಖಂಡತ್ವವನ್ನು ವಹಿಸಿದ ಪೂಜ್ಯ ಸ್ವಾಮಿ ಶಾರದಾನಂದ ಸರಸ್ವತಿ, ಚಿನ್ಮಯ ಇಂಟರ್ನೇಶನಲ್ ಫೌಂಡೇಶನ್ ಎರ್ನಾಕುಳಂ ಅವರು ಮಕ್ಕಳಲ್ಲಿ ಸಾತ್ವಿಕ ಬುದ್ಧಿಯೂ, ಸುಸ್ವಭಾವವೂ ಬೆಳೆದು ಬರಲು ಗಾಯತ್ರಿ ದೇವಿಯ ಅನುಗ್ರಹದಿಂದ ಮಾತ್ರ ಸಾದ್ಯ ಎಂದರಲ್ಲದೆ ತಾನು ಹವನವನ್ನು ಪೂರೈಸುವುದರೊಂದಿಗೆ ವಿದ್ಯಾರ್ಥಿಗಳು ಸ್ವತ: ನಿರ್ವಹಿಸಲು ಪ್ರಚೋದಿಸಿದರು.
ಚಿನ್ಮಯ ಮಿಷನಿನ ಅಂತಾರಾಷ್ಟ್ರೀಯ ಮುಖ್ಯಸ್ಥ ಸ್ವಾಮಿ ಸ್ವರೂಪಾನಂದ ಸರಸ್ವತಿಜಿಯವರ ಸಾನಿಧ್ಯದಲ್ಲಿ ವಿದ್ಯಾಲಯದ ಅಧ್ಯಕ್ಷ ಪೂಜ್ಯ ಸ್ವಾಮಿ ವಿವಿಕ್ತಾನಂದ ಸರಸ್ವತಿಜಿಯವರು, ಚಿನ್ಮಯ ಮಿಷನ್‍ನ ಪದಾಧಿಕಾರಿಗಳು, ಕೇರಳದಾದ್ಯಂತ ಆಗಮಿಸಿದ ಬ್ರಹ್ಮಚಾರಿಗಳು, ಸ್ವಾಮೀಜಿಯವರ ಸಹಿತ ಪೆÇೀಷಕರು, ವಿದ್ಯಾರ್ಥಿಗಳು ಅಪೂರ್ವವಾದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.