ಕುಂಬಳೆ: ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶವನ್ನು ಉನ್ನತಿಗೇರಿಸಲು ಇತ್ತೀಚೆಗೆ ತರಗತಿ ಕಾರ್ಯಾಗಾರ ನಡೆಯಿತು.
ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹಾಗೂ ಬದುಕಿನ ಗುರಿಸಾಧನೆ ಎಂಬ ವಿಷಯದ ಕುರಿತು ನವೀನ್ ಎಲ್ಲಂಗಳ ತರಗತಿ ನಡೆಸಿದರು. ಸುಯೋಗ್ಯ ಗುಣಾತ್ಮಕ ಫಲಿತಾಂಶವನ್ನು ಹೆಚ್ಚಿಸುವುದಕ್ಕಾಗಿ ಕ್ರಿಯಾಯೋಜನೆ ರಚಿಸಿ ಅನುಷ್ಠಾನಗೊಳಿಸಲು ಕಲಿಕೆಯ ವಿವಿಧ ಹಂತಗಳನ್ನು ಪರಿಚಯಿಸಿದರು. ಕಲಿಕಾ ಕೌಶಲಗಳು ಹಾಗೂ ಕ್ರಿಯಾತ್ಮಕ ಬದುಕನ್ನು ಕಟ್ಟಿಕೊಳ್ಳುವ ಬಗ್ಗೆ ಸಲಹೆ ನೀಡಿದರು.
ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವ್ಯವಸ್ಥಾಪಕ ಎನ್.ಶಂಕರನಾರಾಯಣ ಭಟ್ ಶುಭಾಶಂಸನೆಗೈದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನವೀನ್ ಎಲ್ಲಂಗಳ ಅವರಿಗೆ ಶಾಲೆಯ ಪರವಾಗಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಧ್ಯಾಪಕ ಪ್ರಶಾಂತ ಹೊಳ್ಳ ಸ್ವಾಗತಿಸಿ, ಇಂಗ್ಲೀಷ್ ಶಿಕ್ಷಕಿ ಉಮಾದೇವಿ ವಂದಿಸಿದರು. ಅಧ್ಯಾಪಕ ರಾಜಕುಮಾರ್ ಕೆ., ಕೇಶವ ಪ್ರಸಾದ್ ಎಡಕ್ಕಾನ, ದಿನೇಶ ಸಹಕರಿಸಿರು.