ಕುಂಬಳೆ: ಮನುಷ್ಯನ ಬದುಕು ಪರಿಪೂರ್ಣವಾಗಲು ಲಭಿಸಿದ ಅವಕಾಶವನ್ನು ಸದ್ವಿನಿಯೋಗಗೊಳಿಸÅವುದರಲ್ಲಿದೆ. ಭಗವಂತನಿಗೆ ಪ್ರಿಯವಾಗುವಂತಹ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಬಹುಜನರ ಪ್ರಾರ್ಥನೆಗೆ ಹೇಗೆ ಮಹತ್ವವಿದೆಯೋ ಅದರಂತೆ ಬಹುಜನರ ಬೇಡಿಕೆಗೆ ಭಗವಂತ ಅನುಗ್ರಹವನ್ನು ನೀಡುತ್ತಾನೆ ಎಂದು ಕಾಸಗೋಡು ಜಿಲ್ಲಾ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಅಧ್ಯಕ್ಷ ಹಿರಣ್ಯ ಮಹಾಲಿಂಗ ಭಟ್ ಅಭಿಪ್ರಾಯಪಟ್ಟರು.
ಕಾಸರಗೋಡು ಸಾಯಿ ಮಂದಿರದಲ್ಲಿ ನಡೆದ ಕಾಸರಗೋಡು ಜಿಲ್ಲಾ ಶ್ರೀ ಸತ್ಯಸಾಯಿ ಸೇವಾ ಸಮಿತಿಗಳ ತ್ರೈಮಾಸಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದೇ ವೇಳೆ ಜಿಲ್ಲಾ ಆಧ್ಯಾತ್ಮಿಕ ಸಂಯೋಜಕ ಮಲಾರ್ ಜಯರಾಮ ರೈ , ನವೀನ್ ಉಪ್ಪಳ , ಪ್ರೇಮಲತಾ ಭಟ್, ರೇಖಾ ಗೋಪಾಲ್, ಸಾಯಿಭದ್ರಾ ರೈ, ಜಿಲ್ಲಾ ಯುವ ಸಂಯೋಜಕ ಕೃಷ್ಣ ಪ್ರಸಾದ್ ಕಾಟುಕುಕ್ಕೆ ಮತ್ತಿತರರು ಉಪಸ್ಥಿತರಿದ್ದರು. ಸಭೆಯಲ್ಲಿ ಉಪ್ಪಳ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಶಿವಾನಂದ ಉಪ್ಪಳ , ಶಿರಿಯ ಸಾಯಿ ಸಮಿತಿ ಸಂಚಾಲಕ ಲಲಿತ್‍ಕುಮಾರ್, ಮಧೂರು ಸಮಿತಿ ಸಂಚಾಲಕ ಮಹಾಲಿಂಗೇಶ್ವರ ಭಟ್, ಕಾಟುಕುಕ್ಕೆ ಸಮಿತಿ ಸದಸ್ಯ ಕೃಷ್ಣಪ್ರಾದ್, ಬಾಯಾರು ಸಮಿತಿ ಸಂಚಾಲಕ ಸದಾಶಿವ ಭಟ್ ಹಾಗೂ ಕಾಸರಗೋಡು ಸಮಿತಿ ಸಂಚಾಲಕ ಸುಂದರ ಶೆಟ್ಟಿ ಅವರು ವರದಿಯನ್ನು ವಾಚಿಸಿದರು. ಇದೇ ವೇಳೆ ನೂತನವಾಗಿ ಜಿಲ್ಲಾ ಆಧ್ಯಾತ್ಮಿಕ ಸಂಚಾಲಕರಾಗಿ ಆಯ್ಕೆಗೊಂಡ ಬಾಬು ಪಾಟಾಳಿ ಅವರನ್ನು ಅಭಿನಂದಿಸಲಾಯಿತು. ಸಭೆಯಲ್ಲಿ ಸಮಿತಿ ಹಾಗೂ ಜಿಲ್ಲಾ ಮಟ್ಟಗಳಲ್ಲಿ ಆಯೋಜಿಸಲಾಗುವ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು.
ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಉಪ್ಪಳ ಕಾರ್ಯಕ್ರಮ ನಿರ್ವಹಿಸಿದರು.