ಕಲಬುರಗಿ: ಕಲ್ಯಾಣ ನಗರವನ್ನು ಕನ್ನಡ ನಗರವನ್ನಾಗಿ ಕಲಬುರಗಿ ಮಾಡಿದೆ. ಕಲಬುರಗಿಯಲ್ಲಿ ಕನ್ನಡ ಪೆÇೀಷಿಸಲಾಗುತ್ತಿದೆ ಎಂದು ಕನ್ನಡ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಹೇಳಿದರು.
ಕಸಾಪ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಬೇಡ್ಕರ ಸಮಾನಾಂತರ ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯ ಪ್ರತಿಯೊಬ್ಬರಿಗೂ ತಲುಪಿಸಬೇಕಾದರೆ ರಂಗ ಭೂಮಿ, ಮಾಧ್ಯಮಗಳ ಅಗತ್ಯವಾಗಿದೆ. ಪಾಶ್ಚಿಮಾತ್ಯ ಕಲಾ ಸಂಸ್ಕೃತಿ ನಮಗೆ ವಾಂತಿ ಬರುವಂತಾಗಿದೆ. ಸಾಹಿತ್ಯ ಬಳಸಿಕೊಂಡು ಹೋಗುವುದು ಅಗತ್ಯವಿದೆ. ಭಾಷೆ ಬದುಕಿನ ಜೀವನ. ಇವತ್ತು ಕನ್ನಡ ಉಳಿದಿದೆ ಎಂದರೆ ರೈತರ ಮನೆಯಲ್ಲಿನ ಮಹಿಳೆಯರ ಹತ್ತಿರ ಉಳಿದಿದೆ ಎಂದರು.
ರಾಜ್ಯಕ್ಕೆ, ನಾಡು,ನುಡಿಗೆ ತೊಂದರೆಯಾದಾಗ ಜನತು ಒಕ್ಕಾಟ್ಟಾಗಿರಬೇಕು. ಎಲ್ಲೊ ಒಂದು ಕಡೆ ಸರ್ಕಾರಗಳು ಸಣ್ಣ ತಪ್ಪು ಮಾಡುತ್ತಿವೆ. ಸೌಲಭ್ಯ ಕೊಡುವ ಬದಲಿ ಕನ್ನಡ ಶಾಲೆ ಮುಚ್ಚುವುದಲ್ಲ. ಅಖಂಡ ಕರ್ನಾಟಕ ಎಂಬ ಭಾವನೆ ನಮ್ಮಲ್ಲಿ ಬರಬೇಕು. ಮಾತೃಭಾಷೆದಲ್ಲಿ ಪ್ರಾಥಮಿಕ ಶಿಕ್ಷಣ ಆಗಬೇಕು. ಯಕ್ಷಗಾನ ಕಲಾವಿದರು ಕನ್ನಡವನ್ನು ಉಳಿಸಿದ್ದಾರೆ ಎಂದರು.ಪ್ರಾದೇಶೊಕ ಭಾಷೆ ಸತ್ತರೆ ಭಾವನೆ, ಜೀವನ, ಪ್ರಾದೇಶಿಕ ನೆಲೆಸಾಹುತ್ತವೆ.
ಸಮ್ಮೇಳನ ನಿಕಟಪೂರ್ವಕ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮನು ಬಳಗಾರ. ಅರಣ್ಯ ಇಲಾಖೆ ಅಧಿಕಾರಿ ವಾನತಿ ಉಪಸ್ಥಿತರಿದ್ದರು.