ಕಾಸರಗೋಡು: ಕ್ರೀಡಾಪಟುಗಳಿಗೆ ಮತ್ತು ಪ್ರತಿಭೆಗಳಿಗೆ ಅತ್ಯುತ್ತಮ ಬೆಂಬಲದೊಂದಿಗೆ ರಾಜ್ಯ ಸರಕಾರ ಎಲ್ಲ ರೀತಿಯಲ್ಲಿ ಅಭಿವೃದ್ಧಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕೈಗಾರಿಕೆ, ಕ್ರೀಡಾ ಮತ್ತು ಯುವಜನ ಖಾತೆ ಸಚಿವ ಇ.ಪಿ.ಜಯರಾಜನ್ ಹೇಳಿದರು.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಪದಕ ವಿಜೇತರಿಗೆ ಉದ್ಯೋಗ ನೀಡುವ ಸರಕಾರದ ಯೋಜನೆ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ 513 ಮಂದಿಗೆ ಉದ್ಯೋಗ ನೀಡಲಾಗಿದ್ದು, 105 ಜನರಿಗೆ ನೇಮಕಾತಿ ಆದೇಶ ನೀಡಲಾಗಿದೆ ಎಂದರು.
ಕ್ರೀಡಾ ಮಂಡಳಿ ಅಧೀನದಲ್ಲಿರುವ ಕಾಸರಗೋಡು ಸೆಂಟ್ರಲ್ ಸ್ಪೋಟ್ರ್ಸ್ ಹಾಸ್ಟೆಲ್‍ನ ನವೀಕರಿಸಿದ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯವು 44 ಮಲ್ಟಿ ಪರ್ಪಸ್ ಜಿಮ್ನಾಷಿಯಂಗಳು, 33 ಈಜು ಕೊಳಗಳಲ್ಲಿ ಅರ್ಧದಷ್ಟೆ ಪೂರ್ಣಗೊಳಿಸಿದೆ ಮತ್ತು ಉಳಿದವು ನಿರ್ಮಾಣ ಹಂತದಲ್ಲಿದೆ. 14 ಜಿಲ್ಲೆಗಳಲ್ಲಿ ಸಿಂಥೆಟಿಕ್ ಟ್ರ್ಯಾಕ್‍ಗಳೊಂದಿಗೆ ಜಿಲ್ಲಾ ಕ್ರೀಡಾಂಗಣವನ್ನು ಸಹ ನಿರ್ಮಿಸಲಾಗುತ್ತಿದೆ. ಎಲ್ಲ ಕ್ರೀಡೆಗಳನ್ನು ಉತ್ತೇಜಿಸಲು ಸರಕಾರ ಕ್ರಮವನ್ನು ತೆಗೆದುಕೊಳ್ಳುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಕ್ರೀಡಾ ಕ್ಷೇತ್ರದ ಅಭಿವೃದ್ಧಿಯನ್ನು ಜಾರಿಗೊಳಿಸಿದೆ. ಕಲಿಕೆಯೊಂದಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳು ಸರಕಾರಿ ಹಾಸ್ಟೆಲ್‍ಗಳಲ್ಲಿರುತ್ತಾರೆ. ಇದಲ್ಲದೆ ರಾಜ್ಯದ ಸುಮಾರು ಆರು ಸಾವಿರ ವಿದ್ಯಾರ್ಥಿಗಳಿಗೆ ದಿನ ಖರ್ಚಿಗಾಗಿ 200 ರೂ. ಇದ್ದು ಇದನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೇರಳದಲ್ಲಿ ಬೀಚ್ ಗೇಮ್ಸ್ ಉತ್ತಮ ಸಾಧ್ಯತೆಯನ್ನು ಹೊಂದಿದೆ. ಇದನ್ನು ಗುರುತಿಸಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸ್ಪರ್„ಸುತ್ತಿದ್ದಾರೆ. ಫೈನಲ್ಸ್‍ಗಳು ನಾನಾ ಜಿಲ್ಲೆಗಳಲ್ಲಿ ನಡೆಯುವುದು. ಮುಂದಿನ ವರ್ಷದಿಂದ ಎಲ್ಲ ಜಿಲ್ಲೆಗಳಲ್ಲಿ ಮ್ಯಾರಥಾನ್ ನಡೆಯಲಿದೆ. ಕಾಸರಗೋಡು ಜಿಲ್ಲೆಯನ್ನು ಪ್ರಮುಖ ಕ್ರೀಡಾ ಕೇಂದ್ರವನ್ನಾಗಿ ಮಾಡಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು. ಕ್ರೀಡಾ ವಲಯ ಅಪಾರ ಕೊಡುಗೆ ನೀಡಿದೆ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸ್ಪೋಟ್ರ್ಸ್ ಕೌನ್ಸಿಲ್ ಸದಸ್ಯ, ಕಾಂಞಂಗಾಡು ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್, ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿ.ಎಚ್.ಮುಹಮ್ಮದ್ ಕುಂಞÂ ಚಾಯಿಂಡಡಿ, ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಅಧ್ಯಕ್ಷ ಪಿ.ಹಬೀಬ್ ರಹ್ಮಾನ್, ಕ್ರೀಡಾ ಯುವಜನ ಕಾರ್ಯಾಲಯ ಸಹಾಯಕ ನಿರ್ದೇಶಕ ಬಿ.ಅಜಿತ್ ಕುಮಾರ್, ಕ್ರೀಡಾ ಯುವಜನ ಕಾರ್ಯಾಲಯ ಎಕ್ಸಿಕ್ಯೂಟೀವ್ ಎಂಜಿನಿಯರ್ ಸಿ.ಅನಂತಕೃಷ್ಣನ್, ಮಧೂರು ಪಂಚಾಯತ್ ಉಪಾಧ್ಯಕ್ಷ ದಿವಾಕರ ಆಚಾರ್ಯ, ರಾಜ್ಯ ಸ್ಪೋಟ್ರ್ಸ್ ಕೌನ್ಸಿಲ್ ಸದಸ್ಯ ಟಿ.ವಿ.ಬಾಲನ್, ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಆಡಳಿತ ಸಮಿತಿ ಸದಸ್ಯರು, ರಾಜಕೀಯ ಪಕ್ಷಗಳ ಪ್ರತಿನಿ„ಗಳು ಉಪಸ್ಥಿತರಿದ್ದರು.