ಮಂಜೇಶ್ವರ: ನವಯುವಕ ಕಲಾವೃಂದ ಗ್ರಂಥಾಲಯ ಚಿನಾಲ ಇದರ ಆಶ್ರಯದಲ್ಲಿ ಗಾಂಧಿ ಸ್ಮೃತಿ ಮತ್ತು ಗ್ರಂಥಾಲಯ ಹಿರಿಯ ಕಾರ್ಯಕರ್ತರಿಗೆ ಕೇರಳ ರಾಜ್ಯ ಲೈಬ್ರೆರಿ ಕೌನ್ಸಿಲ್‍ನಿಂದ ಕೊಡಮಾಡಲ್ಪಟ್ಟ ಖಾದಿ ವಸ್ತ್ರಗಳ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಜೊತೆ ಕಾರ್ಯದರ್ಶಿ ಡಿ.ಕಮಲಾಕ್ಷ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಂಥಾಲಯದ ಅಧ್ಯಕ್ಷ ಯೋಗೀಶ.ಕೆ ಅಧ್ಯಕ್ಷತೆ ವಹಿಸಿದ್ದರು. ಮಿಂಜ ಗ್ರಾಮ ಪಂಚಾಯತಿ ಸದಸ್ಯೆ ಆಶಾ ಚಂದ್ರಾವತಿ ಹಿರಿಯ ಗ್ರಂಥಾಲಯ ಸದಸ್ಯ ಪದ್ಮಾವತಿ, ಚಂದ್ರಾವತಿ, ಬಾಲಕೃಷ್ಣ ಶೆಟ್ಟಿ, ಅಣ್ಣು ಮೂಲ್ಯ ಮೊದಲಾದವರನ್ನು ಖಾದಿ ವಸ್ತ್ರ ನೀಡಿ ಗೌರವಿಸಿದರು. ಕೌನ್ಸಿಲರ್, ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್‍ನ ಅಕ್ಷಯ ಕುಮಾರ್ ಗಾಂಧಿ ಸ್ಮೃತಿ ಉಪನ್ಯಾಸ ನೀಡಿ ಮಾತನಾಡಿದರು.
ಗೋಪಾಲಕೃಷ್ಣ, ಮೋನಪ್ಪ ಪೂಜಾರಿ, ರವೀಂದ್ರ ಭಂಡಾರಿ, ನಾರಾಯಣ.ಸಿ, ಲವಾನಂದ, ಲೋಕೇಶ, ಸತೀಶ ಸಿ.ಯಚ್, ಕವಿತಾ, ಲಿಶ್ಮಿತ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸಂದೀಪ್. ಕೆ ಸ್ವಾಗತಿಸಿ, ಗ್ರಂಥಪಾಲಕಿ ಗೀತಾ ಲವಾನಂದ ವಂದಿಸಿದರು. ಉದಯ ಸಿ.ಯಚ್ ನಿರೂಪಿಸಿದರು.