ಪೆರ್ಲ:ಎಣ್ಮಕಜೆ ಪಂಚಾಯಿತಿ ಮಟ್ಟದ ಮೂರು ದಿನಗಳ ಗಣಿತೋತ್ಸವ ಶಿಬಿರದ ಉದ್ಘಾಟನಾ ಸಮಾರಂಭ ಕಾಟುಕುಕ್ಕೆ ಬಾಲಪ್ರಭಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ ಉದ್ಘಾಟಿಸಿದರು.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ.ಅಧ್ಯಕ್ಷತೆ ವಹಿಸಿದರು. ಶಾಲಾ ಸಂಚಾಲಕ ಕೃಷ್ಣ ಭಟ್, ಪಿ.ಟಿ.ಎ.ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಸುಬ್ರಹ್ಮಣ್ಯೇಶ್ವರ ಪ್ರೌಢಶಾಲೆ ಮುಖ್ಯ ಶಿಕ್ಷಕ ಸುಧೀರ್ ಕುಮಾರ್, ಸಿ.ಆರ್.ಸಿ ಸಂಯೋಜಕ ಸುರೇಶ, ಶಿಕ್ಷಕಿ ಸುಪ್ರಿಯ ಶುಭ ಹಾರೈಸಿದರು. ಶಿಕ್ಷಕ ನಂದಕುಮಾರ್, ವಿನೊದ, ಸುಪ್ರೀಯ, ಸುರೇಶ್, ಮಮತ, ಸ್ಮೀತ, ಕಲಾವತಿ, ಸಂತೋಷ ಕುಮಾರ್ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು.ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಗಣಿತ ಶಾಸ್ತ್ರದ ಮಹತ್ವಪೂರ್ಣ ವಿಚಾರಗಳನ್ನು, ಕುತೂಹಲಕಾರಿ ವಿಷಯಗಳನ್ನು ಪರಿಚಯಿಸಲಾಯಿತು.
ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ, ಬಿ.ಪಿ.ಒ. ಶಿವರಾಮ, ಎ.ಡಿ.ಪಿ.ಒ. ನಾರಾಯಣ ಶಿಬಿರ ಸಂದರ್ಶಿಸಿದರು. ಬಾಲಪ್ರಭಾ ಶಾಲೆಯ ಮುಖ್ಯ ಶಿಕ್ಷಕ ಗಣೇಶ್ ಕುಮಾರ್ ಸ್ವಾಗತಿಸಿದರು.ಯಸ್.ಆರ್.ಜಿ.ಸಂಚಾಲಕಿ ಪವಿತ್ರ ವಂದಿಸಿದರು.ವಿಜಯ ಕುಮಾರ್ ನಿರೂಪಿಸಿದರು.