ಮಂಜೇಶ್ವರ: ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದವರಿಂದ ಶ್ರೀ ಮಹಾಗಣಪತಿ ವಿಷ್ಣುಮೂರ್ತಿ ದೇವಸ್ಥಾನ ಇಚ್ಲಂಗೋಡು ದೇಗುಲದಲ್ಲಿ ಇತ್ತೀಚೆಗೆ ಜಾತ್ರಾ ಮಹೋತ್ಸವ ಸಂದರ್ಭ ನಡೆಸಿದ ಗುರುದಕ್ಷಿಣೆ ತಾಳಮದ್ದಳೆ ಜನಮನಗೆಲ್ಲುವಲ್ಲಿ ಯಶಸ್ವಿಯಾಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ರಾಮಪ್ರಸಾದ ಮಯ್ಯ ಕೂಡ್ಲು, ಚೆಂಡೆ ಮದ್ದಳೆಗಳಲ್ಲಿ ಅಕ್ಷಯ್ ರಾವ್ ವಿಟ್ಲ, ರಿತೇಶ್ ಅಡ್ಕ ಹಾಗೂ ಮುಮ್ಮೇಳದಲ್ಲಿ ಹಿರಣ್ಯಧನು ವೇದಮೂರ್ತಿ ಗಣೇಶ ನಾವಡ ಮೀಯಪದವು, ಏಕಲವ್ಯ ರಾಜಾರಾಮ ರಾವ್ ಮೀಯಪದವು, ದ್ರೋಣ ಗುರುರಾಜ ಹೊಳ್ಳ ಬಾಯಾರು, ಅರ್ಜುನ ಅವಿನಾಶ ಹೊಳ್ಳ ವರ್ಕಾಡಿ ಪಾತ್ರನಿರ್ವಹಿಸಿದ್ದರು.