ಬದಿಯಡ್ಕ: ಕೇರಳ ರಾಜ್ಯ ವನಿತಾ ಶಿಶು ಅಭಿವೃದ್ಧಿ ನಿಗಮದ ನೇತೃತ್ವದಲ್ಲಿ `ಎಲ್ಲರಿಗೂ ಸಾರ್ವಜನಿಕ ಸ್ಥಳ' ಎಂಬ ಸಂದೇಶವನ್ನು ಸಾರುವ ಉದ್ದೇಶವನ್ನಿಟ್ಟುಕೊಂಡು ಮಹಿಳೆಯರು ಶನಿವಾರ ರಾತ್ರಿ ಬದಿಯಡ್ಕ ಪೇಟೆಯಲ್ಲಿ ನಿರ್ಭಯರಾಗಿ ಸಂಚರಿಸಿದರು. ರಾತ್ರಿ 11 ರಿಂದ ಮಧ್ಯರಾತ್ರಿ 1 ಗಂಟೆಯವರೆಗೆ ನಡೆದ ರಾತ್ರಿ ನಡಿಗೆ ಕಾರ್ಯಕ್ರಮವನ್ನು ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿದರು. ಬದಿಯಡ್ಕ ಪೆÇಲೀಸ್ ಠಾಣೆಯ ಮಹಿಳಾ ಪೆÇಲೀಸ್ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು, ಕುಡುಂಬಶ್ರೀ ಕಾರ್ಯಕರ್ತರು ಮತ್ತು ಅಂಗನವಾಡಿ ಕುಮಾರಿ ಕ್ಲಬ್ ಸದಸ್ಯರು ಪಾಲ್ಗೊಂಡಿದ್ದರು. ಐಸಿಡಿಎಸ್ ಮೇಲ್ವಿಚಾರಕಿ ಭವ್ಯ ಸ್ವಾಗತಿಸಿ, ಮೇಲ್ವಿಚಾರಕಿ ಜ್ಯೋತಿ ವಂದಿಸಿದರು.
ಬದಿಯಡ್ಕದಲ್ಲಿ ಮಹಿಳೆಯರಿಂದ ನಿರ್ಭಯ ನಡಿಗೆ
0
ಫೆಬ್ರವರಿ 05, 2020