ಕಾಸರಗೋಡು: ಮೊಗ್ರಾಲ್‍ಪುತ್ತೂರು ಕುಟುಂಬ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಪಾಲಿಯೇಟಿವ್ ಸಂಗಮ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲಿಯೇಟಿವ್ ರೋಗಿಗಳು, ಸಂಬಂಧಿಕರು, ಜನಪ್ರತಿನಿ„ಗಳು, ಆರೋಗ್ಯ ಕಾರ್ಯಕರ್ತರು, ಅಂಗನವಾಡಿ, ಆಶಾ, ಯುವಜನ ಕ್ಲಬ್ ಸದಸ್ಯರು, ವಲಂಟಿಯರ್‍ಗಳು ಮೊದಲಾದವರು ಕುಟುಂಬ ಆರೋಗ್ಯ ಕೇಂದ್ರ ಅಂಗಣದಲ್ಲಿ ಮೇಳೈಸಿದ್ದರು. ಕಾರ್ಯಕ್ರಮದಲ್ಲಿ ತಿಳಿವಳಿಕೆ, ಗೌರವಾರ್ಪಣೆ, ಸಾಂಸ್ಕøತಿಕ ಕಾರ್ಯಕ್ರಮಗಳು ಮೊದಲಾದವು ನಡೆಯಿತು.
ನೂರು ವರ್ಷ ಪ್ರಾಯ ದಾಟಿದ ಪೆÇನ್ನಮ್ಮ, ಮಾಧವಿ, ಪಮ್ಮುಂಞÂ ಮೊದಲಾದವರನ್ನು ಚೆನ್ನಾಗಿ ಉಪಚರಿಸಿದ ಸ್ಮಿತಾ, ಅತ್ಯುತ್ತಮ ಆಶಾ ಕಾರ್ಯಕರ್ತೆ ಶೋಭಾ, ಅಂಗನವಾಡಿ ಕಾರ್ಯಕರ್ತೆ ರಮ್ಯಾ, ಅತ್ಯುತ್ತಮ ಜನಪ್ರತಿನಿ„ ಎಸ್.ಎಚ್.ಹಮೀದ್, ಸಾಮಾಜಿಕ ಕಾರ್ಯಕರ್ತ ಕರೀಂ ಚೌಕಿ, ಪಾಲಿಯೇಟಿವ್ ನರ್ಸ್ ಸುಜಾತ, ಚಾಲಕ ಮುನೀರ್ ಅವರನ್ನು ಗೌರವಿಸಲಾಯಿತು.
ಕಾಸರಗೋಡು ನರ್ಸಿಂಗ್ ವಿದ್ಯಾರ್ಥಿನಿಯರು, ಆಶಾ, ಪಾಲಿಯೇಟಿವ್, ಅಂಗನವಾಡಿ ಕಾರ್ಯಕರ್ತರು, ಸ್ಥಳೀಯರು, ಸ್ಥಳೀಯ ಕ್ಲಬ್‍ಗಳ ಸದಸ್ಯರು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೀಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಜಿಸಿ ಬಶೀರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಎ.ಎ.ಜಲೀಲ್ ಅಧ್ಯಕ್ಷತೆ ವಹಿಸಿದರು. ಮೆಡಿಕಲ್ ಆಫೀಸರ್ ಡಾ|ನಾಸ್ಮಿನ್ ಜೆ.ನಸೀರ್ ವರದಿ ಮಂಡಿಸಿದರು. ಪಾಲಿಯೇಟಿವ್ ಜಿಲ್ಲಾ ಕೋ-ಆರ್ಡಿನೇಟರ್ ಶಿಜಿ ಶೇಖರ್, ಉಪಾಧ್ಯಕ್ಷೆ ನ್ಯಾಯವಾದಿ ಸಮೀರ ಫೈಝಲ್, ಗ್ರಾಮ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷರಾದ ಹಮೀದ್ ಬಳ್ಳೂರು. ಮುಜೀಬ್ ಕಂಬಾರು, ಫೌಸಿಯಾ, ಗ್ರಾಮ ಪಂಚಾಯತ್ ಸದಸ್ಯರಾದ ಕೆ.ಅಬ್ದುಲ್ಲ ಕುಂಞÂ, ಎಸ್.ಎಚ್.ಹಮೀದ್, ಸುಹ ಕರೀಂ, ಸೌಜಾನ ರಾಫಿ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಶಿಜ, ಎಸ್.ಎಂ.ಸಿ. ಸದಸ್ಯ ಮಾಹಿನ್ ಕುನ್ನಿಲ್ ಮೊದಲಾದವರು ಮಾತನಾಡಿದರು.ಹೆಲ್ತ್ ಇನ್ಸ್‍ಪೆಕ್ಟರ್ ಬಿ.ಅಶ್ರಫ್ ಸ್ವಾಗತಿಸಿದರು. ಪಾಲಿಯೇಟಿವ್ ನರ್ಸ್ ಸುಜಾತ ವಂದಿಸಿದರು.