ನವದೆಹಲಿ: ಅಷ್ಟೇನೂ ಹುರುಪಿನ ಮತದಾನ ನಡೆಯದ ದೆಹಲಿ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದ್ದು ಮತ್ತೆ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರುವ ಲಕ್ಷಣಗಳು ದಟ್ಟವಾಗಿದೆ.
70 ಶಾಸಕರ ಸಂಖ್ಯಾಬಲದ ದೆಹಲಿ ವಿಧಾನಸಭೆಯಲ್ಲಿ ಅಧಿಕಾರಕ್ಕೆ ಬರಲು 36 ಶಾಸಕರ ಸರಳ ಬಹುಮತ ಅಗತ್ಯವಿದ್ದು, ಈ ಬಾರಿಯೂ ಆಮ್ ಆದ್ಮಿ ಪಕ್ಷ ಬಹುಮತ ಪಡೆಯಲಿದೆ.
ಬಿಜೆಪಿ ಕಳೆದ ಬಾರಿಗಿಂತ ಸುಧಾರಣೆ ಕಾಣುವ ಸಾಧ್ಯತೆ ಇದ್ದು 20 ಕ್ಕೂ ಹೆಚ್ಚು ಶಾಸಕರು ಆಯ್ಕೆಯಾಗಲಿದ್ದಾರೆ ಎನ್ನುತ್ತಿದೆ ಎಕ್ಸಿಟ್ ಪೆÇೀಲ್ ಸರ್ವೆ. ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು 2 ಕ್ಕಿಂತ ಹೆಚ್ಚು ಶಾಸಕರು ಆಯ್ಕೆಯಾಗುವುದೂ ಕಷ್ಟ ಎನ್ನುವ ಸ್ಥಿತಿ ಎದುರಿಸುತ್ತಿದೆ.ಚುನಾವಣೋತ್ತರ ಸಮೀಕ್ಷೆಯ ವಿವರ ಹೀಗಿದೆ
ಸಮೀಕ್ಷಾ ಸಂಸ್ಥೆ | ಎಎಪಿ | ಬಿಜೆಪಿ | ಕಾಂಗ್ರೆಸ್ |
ಟೈಮ್ಸ್ ನೌ | 44 | 26 | 00 |
ಇಂಡಿಯಾ ಟಿ.ವಿ | 44 | 26 | 00 |
ನ್ಯೂಸ್ ಎಕ್ಸ್ | 53-57 | 11-17 | 00-02 |
ರಿಪಬ್ಲಿಕ್ | 48-61 | 09-21 | 00-01 |