ಬದಿಯಡ್ಕ: ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಗುರುವಾರ ಕಲಿಕೋತ್ಸವವು ನಡೆಯಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನಾರಾಯಣ ಎಸ್. ಉದ್ಘಾಟಿಸಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮಾತೃ ಸಂಘದ ಅಧ್ಯಕ್ಷೆ ಶಶಿಪ್ರಭಾ ಎಮ್., ಹೈಯರ್ ಸೆಕೆಂಡರಿ ವಿಭಾಗದ ಪ್ರಾಂಶುಪಾಲ ಶಿವಪ್ರಕಾಶ ಎಮ್. ಕೆ., ಹೈಸ್ಕೂಲು ವಿಭಾಗದ ಮುಖ್ಯೋಪಾಧ್ಯಾಯ ವೆಂಕಟರಾಜ ಸಿ. ಎಚ್. ಶುಭಹಾರೈಸಿದರು.
ಸರ್ವಶಿಕ್ಷಾ ಕೇರಳದ ಜಿಲ್ಲಾ ಯೋಜನಾಧಿಕಾರಿ ನಾರಾಯಣ ದೇಲಂಪಾಡಿ ಮತ್ತು ಉಪಜಿಲ್ಲಾ ಯೊಜನಾಧಿಕಾರಿ ಶಿವರಾಮ ಎ. ಸಂದರ್ಶಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿಯರಾದ ಸಿಂಚನ ವೈ. ಶೆಟ್ಟಿ ಸ್ವಾಗತಿಸಿ, ಸಿಂಧೂರ ಕೆ. ಆರ್. ವಂದಿಸಿದರು. ಶ್ರೇಯ ಎಮ್. ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಾಲೆಯಲ್ಲಿ ಗಳಿಸಿದ ಅನುಭವದ ಮೂಲಕ ವಿಜ್ಞಾನದ ಪ್ರಯೋಗಗಳು, ಗಣಿತದ ಆಸಕ್ತಿದಾಯಕ ಲೆಕ್ಕಗಳು, ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಮಾದರಿಗಳು ಪ್ರದರ್ಶನಗೊಂಡಿತು.