ಕಾಸರಗೋಡು: ಜಿಲ್ಲೆಯ ಸರ್ಕಾರಿ ಸಂಸ್ಥೆಗಳಿಗೆ ಸೌರಶಕ್ತಿ ವಿದ್ಯುತ್ ಸಂಪರ್ಕ ಒದಗಿಸುವ ರಾಜ್ಯ ಸರ್ಕಾರದ ಯೋಜನೆಯ ಮೊದಲ ಹಂತ ಪೂರ್ಣಗೊಂಡಿದೆ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ಜಿಲ್ಲೆಯ ಆಯ್ದ 10 ಸಾರ್ವಜನಿಕ ಕಾರ್ಯಾಲಯಗಳಿಗೆ ಸೌರಶಕ್ತಿ ವಿದ್ಯುತ್ ಸಂಪರ್ಕ ಲಭಿಸಲಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮುಖಂತರ ಲಭಿಸಿದ 5.38 ಕೋಟಿ ರೂ. ಮಂಜೂರುಗೊಂಡಿದ್ದು, ಈ ನಿಧಿಯ ಬಳಕೆಯಿಂದ ಯೋಜನೆಯ ಮೊದಲ ಹಂತ ಪೂರ್ಣಗೊಂಡಿಎ. ಕಾಞಂಗಾಡ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸ್ಥಾಪಿಸಲಾದ 185 ಕಿಲೋ ವ್ಯಾಟ್ ಪ್ಲಾಂಟ್ ಈ ನಿಟ್ಟಿನಲ್ಲಿ ಅತದೊಡ್ಡ ಘಟಕವಾಗಿದೆ. ಜೊತೆಗೆ ಪಡನ್ನಕ್ಕಾಡಿನಲ್ಲಿರುವ ಜಿಲ್ಲಾ ಆಯುರ್ವೇದ ಹಾಸ್ಪಿಟಲ್ ನಲ್ಲಿರುವ 15 ಕಿಲೋ ವ್ಯಾಟ್, ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 30 ಕಿಲೋ ವ್ಯಾಟ್, ಚಂದ್ರಗಿರಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 20 ಕಿಲೋ ವ್ಯಾಟ್ ಪ್ಲಾಂಟ್ ಪೂರ್ತಿಗೊಂಡು ವಿದ್ಯುತ್ ಉತ್ಪಾದನೆಗೆ ಸಿದ್ಧವಾಗಿವೆ. ಆಯ್ದ ಸರಕಾರಿ ಸಂಸ್ಥೆಗಳಲ್ಲಿ ಗ್ರಿಡ್ ಕೇಂದ್ರಿತ ಸೌರಶ್ತಿ ಘಟಕ ಸ್ಥಾಪಿಸಲಾಗಿದೆ. ಚಟುವಟಿಕೆಯ ವೆಚ್ಚ, ತರಬೇತಿ ವೆಚ್ಚ ಕಡಿಮೆಯಿರುವ ಇಂಥಾ ಗ್ರಿಡ್ ಕೇಂದ್ರಿತ ಸೌರಶಕ್ತಿ ಘಟಕ ನಿರ್ಮಾಣ ಪೂರ್ತಿಗೊಂಡಲ್ಲಿ ಸಂಸ್ಥೆಗಳಿಗೆ ವಿದ್ಯುತ್ ಲಭಿಸಲಿದೆ.
ಅಧಿಕ ವಿದ್ಯುತ್ ಇದ್ದಲ್ಲಿ ಕೆ.ಎಸ್.ಇ.ಬಿಗೆ ನೀಡಬಹುದು:
ಗ್ರಿಡ್ ಕೇಂದ್ರಿತ ಸೌರಶಕ್ತಿ ಪ್ಲಾಂಟ್ ಆಗಿರುವುದರಿಂದ ಸಂಸ್ಥೆಗಳ ಬಳಕೆ ನಡೆದು ಉಳಿದ ವಿದ್ಯುತ್ತನ್ನು ಕೆ.ಎಸ್.ಇ.ಬಿ.ಗೆ ನೀಡಲು ಸಾಧ್ಯವಾಗಲಿದೆ. ಜಿಲ್ಲೆಯ ವಿದ್ಯುತ್ ಕೊರತೆಗೆ ಪರಿಹಾರ ಒದಗಿಸುವುದರ ಜೊತೆಗೆ ಕೆ.ಎಸ್.ಇ.ಬಿ.ಗೆ ನೀಡುವ ವಿದ್ಯುತ್ ಗೆ ಯೂನಿಟ್ ಗಣನೆಯಲ್ಲಿ ಮೊಬಲಗು ವಿದ್ಯುನ್ಮಮಂಡಳಿ ಆಯಾ ಸಂಸ್ಥೆಗೆ ನೀಡಲಿದೆ. ಜಿಲ್ಲಾ ಪಂಚಾಯತ್ ಮುಖಾಂತರ ಜಾರಿಗೊಳಿಸುವ ಯೋಜನೆಯಲ್ಲಿ 25 ವರ್ಷ ವಾರೆಂಟಿ ಇರುವ ಪ್ಯಾನೆಲ್ ಗಳನ್ನು ಬಳಸಲಾಗಿದೆ. ಕಾಸರಗೋಡು ಅಭಿವೃಧ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ಜಾರಿಗೊಳಿಸಲಾಗುವ ಇಂಥಹಾ 10 ಪ್ಲಾಂಟ್ ಗಳನಿರ್ಮಾಣ ದಲ್ಲಿ ಒಟ್ಟು 7453 ಚದರ ಅಡಿ ವಿಸ್ತೀರ್ಣದಲ್ಲಿ ಸೋಲಾರ್ ಪ್ಯಾನೆಲ್ ಸ್ಥಾಪಿಸಲಾಗುವುದು. ಪ್ಲಾಂಟ್ ಸ್ಥಾಪಿಸುವ ಕಚೇರಿಗಳಲ್ಲಿ ವಿದ್ಯುತ್ ಸ್ವಾವಲಂಬನೆ ಒದಗಿಉಸವುದು ಈ ಯೋಜನೆಯ ಪ್ರಧಾನ ಉದ್ದೇಶ.
ಚಿತ್ರ ಮಾಹಿತಿ: ಮೊಗ್ರಾಲ್ ಪುತ್ತೂರು ಸರಕಾರಿ ಹೈಯರ್ ಸೆಕೆಂಡೆರಿ ಶಾಲೆಯಲ್ಲಿ ಸ್ಥಾಪಿಸಲಾದ ಗ್ರಿಡ್ ಕೇಂದ್ರಿತ ಸೌರಶಕ್ತ ಪ್ಲಾಂಟ್.