ಉಪ್ಪಳ: ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಅಪ್ರತಿಮ ಓಟಗಾರ ಶ್ರೀನಿವಾಸ ಗೌಡ ಶನಿವಾರ ರಾತ್ರಿ ನಾಲ್ಕು ಪದಕ ಗೆದ್ದಿದ್ದಾರೆ. ಈ ಮೂಲಕ ಒಂದೇ ವರ್ಷ ಕಂಬಳ ಕ್ರೀಡೆಯಲ್ಲಿ ಅವರು ಒಟ್ಟು 39 ಪದಕಗಳನ್ನು ಗೆದ್ದುಕೊಂಡಂತಾಗಿದೆ.
ಪೈವಳಿಕೆಯ ಬೋಳಂಗಳದಲ್ಲಿ ಆಯೋಜಿಸಲಾಗಿದ್ದ ಬೆಳದಿಂಗಳ 2ನೇ ವರ್ಷದ ಅಣ್ಣ-ತಮ್ಮ ಜೋಡುಕರೆ ಕಂಬಳದಲ್ಲಿ ಶ್ರೀನಿವಾಸ ಗೌಡ ಈ ದಾಖಲೆಮಾಡಿದ್ದಾರೆ.
ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ ವಿಭಾಗದಲ್ಲಿ ಶ್ರೀನಿವಾಸ ಗೌಡ ಓಡಿಸಿದ ಜೋಡಿಕೋಣಗಳು ಪ್ರಥಮ ಹಾಗೂ ಹಗ್ಗ ಹಿರಿಯ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿವೆ. ಈ ಮೂಲಕ ಶ್ರೀನಿವಾಸ ಗೌಡ ಅವರ ಮಡಿಲಿಗೆ ಒಂದೇ ಕಂಬಳದಲ್ಲಿ ನಾಲ್ಕು ಪದಕ ಲಭಿಸಿದಂತಾಗಿದೆ.
ಈ ಕಂಬಳದಲ್ಲಿ ಶ್ರೀನಿವಾಸ ಗೌಡ ಅವರು 131 ಮೀಟರ್‍ನ್ನು 12.54 ಸೆಕೆಂಡ್‍ನಲ್ಲಿ ಕ್ರಮಿಸಿ ಪದಕ ಬೇಟೆಯಾಗಿದ್ದಾರೆ. ಇವರಿಗೆ ಸರಿಸಾಟಿಯಾಗಿ ಸುರೇಶ್ ಹಾಗೂ ಆನಂದ ಎಂಬ ಕಂಬಳ ಓಟಗಾರರು 131 ಮೀಟರ್‍ನ್ನು 12.46 ಸೆಕೆಂಡ್‍ಗಳಲ್ಲಿ ಕ್ರಮಿಸಿ ಪದಕ ಗೆದ್ದಿದ್ದಾರೆ. ಸುರೇಶ್ ಎರಡು ಹಾಗೂ ಆನಂದ ಒಂದು ಪದಕ ಗೆದ್ದುಕೊಂಡಿದ್ದಾರೆ. ಈ ಕಂಬಳದಲ್ಲಿ ಕನೆಹಲಗೆ-2 ಜೊತೆ, ಅಡ್ಡಹಲಗೆ- 5 ಜೊತೆ, ಹಗ್ಗ ಹಿರಿಯ-9 ಜೊತೆ, ನೇಗಿಲು ಹಿರಿಯ-22 ಜೊತೆ, ಹಗ್ಗ ಕಿರಿಯ-10 ಜೊತೆ, ನೇಗಿಲು ಕಿರಿಯ-47 ಜೊತೆ ಸೇರಿ ಒಟ್ಟು 95 ಜೋಡಿ ಕೋಣಗಳು ಭಾಗವಹಿಸಿದ್ದವು.
ಈ ಕಂಬಳ ಋತುವಿನಲ್ಲಿ ಶ್ರೀನಿವಾಸ ಗೌಡ ಅವರು ಇದುವರೆಗೆ 13 ಕಂಬಳದಲ್ಲಿ 35 ಪ್ರಥಮ ಹಾಗೂ ನಾಲ್ಕು ದ್ವಿತೀಯ ಬಹುಮಾನ ಗೆದ್ದುಕೊಂಡಂತಾಗಿದೆ. ಫೆ.29ರಂದು ಉಪ್ಪಿನಂಗಡಿಯಲ್ಲಿ ಹಾಗೂ ಮಾರ್ಚ್ 7ರಂದು ಬೆಳ್ತಂಗಡಿಯ ಬಂಗಾಡಿಯಲ್ಲಿ ಕಂಬಳ ನಡೆಯುವುದರೊಂದಿಗೆ ಈ ಬಾರಿಯ ಕಂಬಳ ಸೀಸನ್ ಮುಕ್ತಾಯಗೊಳ್ಳಲಿದೆ.
ವಿಶೇಷತೆ:
ಕಂಬಳ ಫಲಿತಾಂಶ:
ಕನೆಹಲಗೆ: ಬೇಲಾಡಿ ಬಾವ ಅಶೋಕ್ ಶೆಟ್ಟಿ, ಹಲಗೆ ಮುಟ್ಟಿದವರು: ನಾರಾವಿ ಯುವರಾಜ
ಜೈನ್ (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ), ಬೊಳ್ಳಂಬಳ್ಳಿ ಚೈತ್ರ
ಪರಮೇಶ್ವರ ಭಟ್, ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ (6.5 ಕೋಲು
ನಿಶಾನೆಗೆ ನೀರು ಹಾಯಿಸಿದ್ದಾರೆ)
ಅಡ್ಡ ಹಲಗೆ: ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ, ಹಲಗೆ ಮುಟ್ಟಿದವರು:
ಮಂದಾರ್ತಿ ಶಿರೂರು ಗೋಪಾಲ ನಾಯ್ಕ, ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ,
ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ
ಹಗ್ಗ ಹಿರಿಯ: ಪ್ರಥಮ: ಕೂಳೂರು ಪೆÇಯ್ಯೆಲು ಪಿ.ಆರ್.ಶೆಟ್ಟಿ (ಅಣ್ಣ ಕರೆ),
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್, ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್,
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ(ತಮ್ಮ ಕರೆ)
ಹಗ್ಗ ಕಿರಿಯ: ಪ್ರಥಮ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ,
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ, ದ್ವಿತೀಯ: ಸೂಡ ಹಳೆಮನೆ ಅಜಿತ್
ರಾಜ್ ಶೆಟ್ಟಿ, ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್
ನೇಗಿಲು ಹಿರಿಯ: ಪ್ರಥಮ: ಬೋಳದಗುತ್ತು ಸತೀಶ್ ಶೆಟ್ಟಿ, ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ, ದ್ವಿತೀಯ: ಇರುವೈಲು ಪಾನಿಲ ಬಾಡ ಪೂಜಾರಿ, ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ನೇಗಿಲು ಕಿರಿಯ: ಪ್ರಥಮ: ಪೆರುವಾಯಿ ಕುಂಬಳೆಕೋಡಿ ರಂಜಿತ್ ಮಾರ್ಲ, ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ಉಡುಪಿ ಹಿರೇಬೆಟ್ಟು ಶಂಕರ ದೇವಾಡಿಗ, ಓಡಿಸಿದವರು: ಹಿರೇಬೆಟ್ಟು ಆಕಾಶ್