ನವದೆಹಲಿ: ಭಾರತದ ಇತಿಹಾಸದಲ್ಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2020ರ ಹಣಕಾಸು ಭಾಷಣ ಸುದೀರ್ಘ ಭಾಷಣ ಎಂಬ ಖ್ಯಾತಿಗೆ ಪಾತ್ರವಾಗಿದೆ.
2019ರಲ್ಲಿ ನಿರ್ಮಲಾ ಸೀತಾರಾಮನ್ ಅವರೇ 2 ಗಂಟೆ 17 ನಿಮಿಷಗಳ ಕಾಲ ಬಜೆಟ್ ಭಾಷಣ ಮಾಡಿದ್ದರು. ಇದೀಗ ಅವರ ಸುದೀರ್ಘ ಭಾಷಣದ ದಾಖಲೆಯನ್ನು ಅವರೇ ಮುರಿದಿದ್ದಾರೆ. ಈ ಬಾರಿ ನಿರ್ಮಲಾ ಅವರು 2 ಗಂಟೆ 40 ನಿಮಿಷಗಳ ಕಾಲ ಬಜೆಟ್ ಭಾಷಣ ಮಾಡಿದ್ದರು. ಕೊನೆಯಲ್ಲಿ ಅನಾರೋಗ್ಯ ಕಾಡಿದ್ದರಿಂದ ಇನ್ನು ಕೆಲ ಪುಟಗಳು ಇರುವಂತೆ ತಮ್ಮ ಭಾಷಣವನ್ನು ನಿಲ್ಲಿಸಿದರು.
2003ರಲ್ಲಿ ಎನ್ಡಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಜಸ್ವಂತ್ ಸಿಂಗ್ ಅವರು 2 ಗಂಟೆ 15 ನಿಮಿಷಗಳ ಭಾಷಣ ಮಾಡಿದ್ದರು. ಇನ್ನು ಭಾರತದ ಇತಿಹಾಸದಲ್ಲಿ ಕೆಲವೇ ನಿಮಿಷಗಳ ಭಾಷಣ ಮಾಡಿದ್ದ ಕೀರ್ತಿ ಎಚ್ ಎಂ ಪಾಟೀಲ್ ಅವರಿಗೆ ಸಲ್ಲುತ್ತದೆ. 1977ರಲ್ಲಿ ಪಾಟೀಲ್ ಅವರು 800 ಪದಗಳಲ್ಲೇ ತಮ್ಮ ಭಾಷಣ ಮುಗಿಸಿದ್ದರು.
ನಿರ್ಮಲಾ ಸೀತಾರಾಮನ್ ಅವರು ಸುದೀರ್ಘ ಭಾಷಣ ಮಾಡಿದ್ದಾರೆ. ಆದರೆ ಅವರ ಭಾಷಣ ಸಂಪೂರ್ಣ ಟೊಳ್ಳಾಗಿದೆ. ನೂತನ ಬಜೆಟ್ ನಲ್ಲಿ ಹೊಸದೇನು ಕಾಣುತ್ತಿಲ್ಲ. ಹಳೆಯ ವಿಷಯಗಳನ್ನೇ ಇಲ್ಲಿ ಮತ್ತೆ ಮತ್ತೆ ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.