ಮುಳ್ಳೇರಿಯ : ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಂಗಸಂಸ್ಥೆಯಾದ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಮಾಸಿಕ ಸಭೆಯು ಭಾನುವಾರ ಆಲಂತಡ್ಕದ ಬಾಲಕೃಷ್ಣ ಕೇಕುಣ್ಣಾಯರ ಮನೆಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷ ನೂಜಿಬೆಟ್ಟು ವೆಂಕಟಕೃಷ್ಣ ಕಾರಂತ ವಹಿಸಿದ್ದರು. 2020 ಮಾರ್ಚ್ 8ರಂದು ಬೆಳಗ್ಗೆ 8ರಿಂದ ಆದೂರು ಮಲ್ಲಾವರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದಲ್ಲಿ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಆಶ್ರಯದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆಯುವ ಧನ್ವಂತರಿ ಹೋಮವನ್ನು ಯಶಸ್ವಿಗೊಳಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಧನ್ವಂತರಿ ಹೋಮ ಸೇವಾ ಕೂಪನ್ ಅನ್ನು ಆಲಂತಡ್ಕ ಬಾಲಕೃಷ್ಣ ಕೇಕುಣ್ಣಾಯರಿಗೆ ನೀಡುವ ಮೂಲಕ ಯೋಜನೆಗೆ ಚಾಲನೆ ನೀಡಲಾಯಿತು. ಸಂಘಟನೆಯ ಆಶ್ರಯದಲ್ಲಿ ಆಸಕ್ತರಿಗಾಗಿ ಉಚಿತ ತಾಂತ್ರಿಕ ಪೂಜಾ ತರಬೇತಿಯನ್ನು ಆರಂಭಿಸಲು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಆಲಂತಡ್ಕದ ಖುಷಿ ನರ್ಸರಿಯ ಮಾಲಕ ಲಕ್ಷ್ಮೀಶ ಕೇಕುಣ್ಣಾಯರು ಗಿಡಗಳಿಗೆ ಕಸಿ ಕಟ್ಟುವ ವಿಧಾನದ ಬಗ್ಗೆ ಪ್ರಾಯೋಗಿಕ ಪ್ರಾತ್ಯಕ್ಷಿಕೆ ನೀಡಿದರು. ಕರ್ನಾಟಕದಲ್ಲಿ ನಡೆದ ಯಕ್ಷಗಾನ ಭಾಗವತಿಕೆ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಎಂಕಣಮೂಲೆ ನಿತೀಶ್ ಮನೊಳಿತ್ತಾಯರನ್ನು ಅಭಿನಂದಿಸಲಾಯಿತು. ಸಭೆಯಲ್ಲಿ ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷೆ ಸತ್ಯಪ್ರೇಮ ಭಾರಿತ್ತಾಯ, ವಲಯ ಸಮಿತಿ ಉಪಾಧ್ಯಕ್ಷ ರವಿರಾಜ ಕೇಕುಣ್ಣಾಯ, ವಲಯ ಖಜಾಂಜಿ ಶ್ರೀಪ್ರಸಾದ ಎ, ಸದಸ್ಯರಾದ ಸುಮತಿ ಬಿ, ಲತಾ ಕೆ ಆರ್, ಆಶಾ ಎ, ಪರಮೇಶ್ವರ ಕೇಕುಣ್ಣಾಯ, ಗುರುರಾಜ್ ಕೇಕುಣ್ಣಾಯ, ಸತ್ಯನಾರಾಯಣ ಕೆ ಎ, ಸಾತ್ವಿಕ್ ಕೇಕುಣ್ಣಾಯ, ಖುಷಿ, ಸಾಕ್ಷಿ ಇದ್ದರು. ಲಕ್ಷ್ಮೀಶ ಕೇಕುಣ್ಣಾಯ ಆಲಂತಡ್ಕ ಸ್ವಾಗತಿಸಿದರು. ವಲಯ ಕಾರ್ಯದರ್ಶಿ ಪ್ರಶಾಂತ ರಾಜ ವಿ ತಂತ್ರಿ ವಂದಿಸಿದರು. ಮುಂದಿನ ಸಭೆಯು ಮಾರ್ಚ್ 7ರಂದು ಬೆಳಗ್ಗೆ 10 ಗಂಟೆಗೆ ಅಡೂರು ಮಹಾಲಿಂಗೇಶ್ವರ ಕ್ಷೇತ್ರ ಪರಿಸರದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಶಿವಳ್ಳಿ ಸಭಾದಿಂದ ಧನ್ವಂತರಿ ಹೋಮಕ್ಕೆ ಸಿದ್ಧತೆ
0
ಫೆಬ್ರವರಿ 11, 2020