ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಭಾನುವಾರ ಸೂರ್ಯಾಸ್ತಮಾನದಿಂದ ಆರಂಭಗೊಂಡ ಅಖಂಡ ಭಜನಾ ಸಪ್ತಾಹಕ್ಕೆ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ದೀಪ ಪ್ರಜ್ವಾಲನೆಯ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಗುರುವಾಯೂರಿನ ಶ್ರೀ ಕೋದಮಂಗಲಂ ವಾಸುದೇವನ್ ನಂಬೂದಿರಿ ಮತ್ತು ಎರ್ನಾಕುಲಂನ ನಿವೃತ್ತ ಲೆಫ್ಟಿನೆಂಟ್ ಕಮಾಂಡರ್ ಪಿ.ಕೆ.ಎನ್. ಪಿಳ್ಳೆ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಮಾರ್ಚ್ 1 ರ ಸೂರ್ಯಾಸ್ತದವರೆಗೂ ಅಖಂಡವಾಗಿ ನಡೆಯುವ ಈ ಭಜನಾ ಮಹೋತ್ಸವದಲ್ಲಿ ಕಾಸರಗೋಡು, ದಕ್ಷಿಣಕನ್ನಡ, ಉಡುಪಿ ಮುಂತಾದೆಡೆಗಳಿಂದ 170ಕ್ಕೂ ಅಧಿಕ ಭಜನಾ ತಂಡಗಳು ಭಜನಾಸೇವೆ ಸಲ್ಲಿಸಲಿದ್ದಾರೆ.