ಮುಳ್ಳೇರಿಯ: ಕೋಟೂರಿನ ಶ್ರೀ ಕಾರ್ತಿಕೇಯ ಭಜನಾ ಮಂದಿರದ ನವೀಕರಣದ ಅಂಗವಾಗಿ ಕೈಗೊಂಡಿರುವ ತಾಂಬೂಲ ಪ್ರಶ್ನೆ ಚಿಂತನೆಯಲ್ಲಿ ನಮೂದಿಸಿರುವ ಪ್ರಕಾರ ಬೆದ್ರಡ್ಕದ ವಾಸ್ತು ಶಿಲ್ಪಿಗಳಾದ ರಮೇಶ ಕಾರಂತ ಅವರು ಗುರುವಾರ ಆಗಮಿಸಿದರು. ಮಂದಿರದ ಸ್ಥಳ ವೀಕ್ಷಣೆ ಮಾಡಿ ಪರಿಶೋಧಿಸಿ ವಾಸ್ತು ವಿವರಗಳನ್ನು ನೀಡಿದರು.
ಯಂ ಕೆ ಸೋಮಶೇಖರ ಬಳ್ಳುಳ್ಳಾಯ, ಗೋವಿಂದ ಬಳ್ಳಮೂಲೆ ಮತ್ತು ಗೋಪಾಲನ್ ಕೋಟೂರು, ಪ್ರಕಾಶ್, ಪ್ರಭಾಕರ ಕೋಟೂರು, ವಿಶ್ವನಾಥ, ಗೋಪಾಲ ಮಣಿಯಾಣಿ ಮೊದಲಾದ ಸಮಿತಿ ಪದಾಧಿಕಾರಿಗಳು, ಊರ ಮಹನೀಯ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.