ಬದಿಯಡ್ಕ: ಕೊಲ್ಲಂಗಾನ ಪಾಂಡವರಕೆರೆ ಶ್ರೀಅಶ್ವತ್ಥ ಸನ್ನಿಧಿ ಮತ್ತು ನಾಗ ದೇವರ ಪ್ರಥಮ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಭಾನುವಾರ ಮತ್ತು ಸೋಮವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಭಾನುವಾರ ಸಂಜೆ 6ಕ್ಕೆ ದೀಪಾರಾಧನೆ, 7 ರಿಂದ ಶ್ರೀನಾಗದೇವರಿಗೆ ಸಾಮೂಹಿಕ ಆಶ್ಲೇಷ ಪೂಜೆ, ಪ್ರಸಾದ ವಿತರಣೆ. ರಾತ್ರಿ 8.30 ರಿಂದ ಅನ್ನಸಂತರ್ಪಣೆ ನಡೆಯಿತು.
ಸೋಮವಾರ ಬೆಳಿಗ್ಗೆ 7.30ಕ್ಕೆ ಶ್ರೀಗಣಪತಿ ಹೋಮ, 9ಕ್ಕೆ ಕಲಶಪೂಜೆ, ಅಭಿಷೇಕ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪನೆಗಳು ನೆರವೇರಿದವು. ಸಂಜೆ 6ಕ್ಕೆ ದೀಪಾರಾಧನೆ, 6.30 ರಿಂದ ಶ್ರೀನಾಗದೇವರಿಗೆ ಮಹಾ ತಂಬಿಲ ಸೇವೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಬಳಿಕ ಕೊಲ್ಲಂಗಾನ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಪ್ರಚಂಡ ಕೌಶಿಕ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.