ಮುಳ್ಳೇರಿಯ: ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ವರ್ಷಾವಧಿ ಉತ್ಸವವು ವೇದಮೂರ್ತಿ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಜ. 29ರಿಂದ ಪ್ರಾರಂಭಗೊಂಡಿದ್ದು, ಫೆ. 2ರ ತನಕ ವಿವಿಧ ವೈದಿಕ, ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ.
ಶನಿವಾರದಂದು ಬೆಳಗ್ಗೆ ಶ್ರೀಬಲಿ, ನಂತರ ಕುಸುಮಾ ಕಾರಂತ ಹಾಗೂ ಕು| ಸುಶ್ಮಿತಾ ಕಾರಂತ ನೆಕ್ರಾಜೆ ಇವರಿಂದ ದಾಸ ಸಂಕೀರ್ತನೆ, 10:30ರಿಂದ ವಿದ್ವಾನ್ ಎ. ಈಶ್ವರ ಭಟ್ ಕಾಂಚನ ಇವರ ಶಿಷ್ಯೆ, ವಿದುಷಿ ಶ್ರೀಮತಿ ವಾಣಿಪ್ರಸಾದ್ ಕಬೆಕ್ಕೋಡು ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ, 11ರಿಂದ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಬಲಿವಾಡು ಕೂಟ, ಪ್ರಸಾದ, ಸಂತರ್ಪಣೆ, ಅಪರಾಹ್ನ ವಿದುಷಿ ಯೋಗೇಶ್ವರೀ ಜಯಪ್ರಕಾಶ್ ವೈಷ್ಣವ ನಾಟ್ಯಾಲಯ ಪುತ್ತೂರು ಇವರ ವಿದ್ಯಾರ್ಥಿಗಳಿಂದ ಭರತನಾಟ್ಯ, ಸಾಯಂಕಾಲ ಗಂಗಾಧರ ಮಾರಾರ್ ನೀಲೇಶ್ವರ ಮತ್ತು ಬಳಗದವರಿಂದ ತಾಯಂಬಕ, ನಾರಂಪಾಡಿ ನೆಲ್ಯಡ್ಕ ಶ್ರೀ ಮೂಕಾಂಬಿಕಾ ಭಜನ ಸಂಘದವರಿಂದ ಭಜನೆ, ನಾರಂಪಾಡಿ ಶಿವಗಿರಿ ಫ್ರೆಂಡ್ಸ್ ಆಟ್ರ್ಸ್&ಸ್ಪೋಟ್ರ್ಸ್ ಕ್ಲಬ್ ಹಾಗೂ ಪುಂಡೂರು-ಕರೋಡಿ ಹಿಂದೂ ಐಕ್ಯವೇದಿ ಇವರಿಂದ ಮೆರವಣಿಗೆ ಮೂಲಕ ಶ್ರೀ ಕ್ಷೇತ್ರಕ್ಕೆ ಪಾತ್ರೆ ಸಮರ್ಪಣೆ, ಮಹಾಪೂಜೆ, ಶ್ರೀಬಲಿ ಉತ್ಸವ, ವಸಂತಕಟ್ಟೆ ಪೂಜೆ, ಬೆಡಿಕಟ್ಟೆ ಪೂಜೆ, ಬೆಡಿಸೇವೆ, ದರ್ಶನಬಲಿ, ಶಯನ, ಕವಾಟಬಂಧನ ಮೊದಲಾದ ಕಾರ್ಯಕ್ರಮಗಳು ಜರಗಿತು.
ಅಬಾಲವೃದ್ದರೆನ್ನದೇ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತರಾದರು.
ಇಂದಿನ ಕಾರ್ಯಕ್ರಮ : (ಫೆ. 02)
ಇಂದು ಬೆಳಗ್ಗೆ 7:30ಕ್ಕೆ ಜಲದ್ರೋಣೀ ಪೂಜೆ, ಯಾತ್ರಾಹೋಮ, ಕವಾಟೋದ್ಘಾಟನೆÀ, ಕಣಿದರ್ಶನ, ಕಲಶಾಭಿಷೇಕ, ಬೆಳಗ್ಗಿನ ಪೂಜೆ. 9.30ರಿಂದ ಶ್ರೀಮತಿ ಸುಗುಣಾ ಬಿ. ತಂತ್ರಿ., 'ತಾಂತ್ರಿಕ ಸದನ' ಉಬ್ರಂಗಳ, 10ರಿಂದ ಸುಳ್ಯ ಶ್ರೀರಾಗಂ ಮಾ|ಅಭಿಷೇಕ್ ಯಂ., ಇವರಿಂದ ಶಾಸ್ತ್ರೀಯ ಸಂಗೀತ, 11ರಿಂದ ತುಲಾಭಾರ ಸೇವೆ, 11ರಿಂದ ಕಾವ್ಯವಾಚನ, ಗೋಪಾಲಕೃಷ್ಣ ಭಟ್ಟ ಕೊಚ್ಚಿ ವಾಚಿಸಲಿದ್ದು, ನಿವೃತ್ತ ಮುಖ್ಯೋಪಾಧ್ಯಾಯರು ನರಹರಿ ಕಳತ್ತೂರು ಪ್ರವಚನ ನೀಡಲಿದ್ದಾರೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ, ಅನ್ನದಾನ, ಅಪರಾಹ್ನ 2:30ರಿಂದ ಶ್ರೀಬಲಿ ಉತ್ಸವ, ವಸಂತಕಟ್ಟೆ ಪೂಜೆ, ಅವಭೃಥ ಸ್ನಾನ, ರಾಜಾಂಗಣ ಪ್ರಸಾದ, ದರ್ಶನಬಲಿ, ಧ್ವಜಾವರೋಹಣ, ಪೂಜೆ, ಮಂತ್ರಾಕ್ಷತೆ, ದೈವಗಳ ತಂಬಿಲ ಸೇವೆ ನಡೆಯಲಿದೆ ಎಂದು ಕ್ಷೇತ್ರ ಪ್ರಕಟನೆಯು ತಿಳಿಸಿದೆ.