HEALTH TIPS

ಇಂದಿನಿಂದ ಪೈವಳಿಕೆ ಬೋಳಂಗಳದಲ್ಲಿ ಅಣ್ಣತಮ್ಮ ಜೋಡುಕರೆ ಕಂಬಳ

           ಉಪ್ಪಳ:  ಪ್ರಸ್ತುತ ಕಾಸರಗೋಡು ಜಿಲ್ಲೆಯ ಏಕೈಕ ಕಂಬಳವೆಂದೇ ಪ್ರಸಿದ್ಧಿ ಪಡೆದ ಪೈವಳಿಕೆ ಸಮೀಪದ ಬೋಳಂಗಳದಲ್ಲಿ ಸತತ ಎರಡನೇ ಬಾರಿ ಅಣ್ಣ ತಮ್ಮ ಜೋಡುಕರೆ ಕಂಬಳ ಇಂದಿನಿಂದ ಫೆ.23ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
      ಬೋಳಂಗಳ ಅಣ್ಣ ತಮ್ಮ ಜೋಡುಕರೆ ಕಂಬಳ ಸಮಿತಿ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಇದರ ಸಹಯೋಗದಲ್ಲಿ ಅಣ್ಣ ತಮ್ಮ ಜೋಡುಕರೆ ಕಂಬಳ ನಡೆಯಲಿದೆ. ಇಂದು ಜನಪದ ಗ್ರಾಮೀಣ ಸ್ಪರ್ಧೆಗಳು ನಡೆಯಲಿದ್ದು, ಬೆಳಿಗ್ಗೆ 10.30ಕ್ಕೆ  ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ ಸಾಲಿಯಾನ್ ಉದ್ಘಾಟಿಸಲಿರುವರು. 10 ಗಂಟೆಗೆ ಪೈವಳಿಕೆಯಿಂದ ಬೋಳಂಗಳೋತ್ಸವ ನಡೆಯುವ ಪರಿಸರಕ್ಕೆ ತುಳುನಾಡಿನ  ವೈಭವದ  ಶೋಭಾಯಾತ್ರೆ ಮೆರವಣಿಗೆ ನಡೆಯಲಿರುವುದು. 11ರಿಂದ ಆಹ್ವಾನಿತ ತಂಡಗಳಿಂದ ಕೊಕ್ಕೋ, ಕಬ್ಬಡ್ಡಿ ಪಂದ್ಯಾಟ, ಹಗ್ಗಜಗ್ಗಾಟ , ಚೆನ್ನೆಮಣೆ ಹಾಗೂ ವಿವಿಧ ಜನಪದ ಸ್ಪರ್ಧೆಗಳು ನಡೆಯಲಿರುವುದು.  ಸಂಜೆ 6ರಿಂದ ಮ್ಯೂಸಿಕಲ್ ನೈಟ್, ನೃತ್ಯ ವೈಭವ ಜರಗಲಿದೆ.
       ಫೆ. 22ರಂದು ಬೆಳಿಗ್ಗೆ 10.30ರಿಂದ ಅಣ್ಣ ತಮ್ಮ ಜೋಡುಕರೆ ಕಂಬಳ ಪ್ರಾರಂಭಗೊಳ್ಳಲಿರುವುದು.  ಬೆಳಿಗ್ಗೆ 9 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ  ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಸಿರಾಜುದ್ದೀನ್ ಫೈಝ್ ಉಸ್ತಾದ್ ಚೇರಾಲು, ವರ್ಕಾಡಿ ಸೇಕ್ರೆಡ್ ಹಾರ್ಟ್ ಇಹರ್ಜಿಯ ಧರ್ಮಗುರು ರೆ.ಫಾ.ಫ್ರಾನ್ಸಿಸ್ ರೋಡ್ರಿಗಸ್ ದಿವ್ಯ ಉಪಸ್ಥಿತರಿರುವರು. ತಂತ್ರಿವರ್ಯ ವಾಸುದೇವ ನಲ್ಲೂರಾಯ ದೀಪ ಪ್ರಜ್ವಲನೆ ಗೈಯ್ಯಲಿರುವರು. ಚಿತ್ತಾರಿ ಪೈವಳಿಕೆ ಅರಮನೆಯ ರ ಂಗತ್ರೈ ಅರಸರು ಉದ್ಘಾಟಿಸಲಿದ್ದಾರೆ. ಪೈವಳಿಕೆ ಗ್ರಾಮ ಪಂ.ಅಧ್ಯಕ್ಷೆ ಭಾರತಿ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಲಿರುವರು. ಇದೇ ಸಂದರ್ಭ ಕಂಬಳ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು.
     ಫೆ.23ರಂದು ಬೆಳಿಗ್ಗೆ 9.30ಕ್ಕೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದ್ದು, ಕಂಬಾರು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಅಧ್ಯಕ್ಷ ಕುಂಞಣ್ಣ ಭಂಡಾರಿ ಕೋಳಾರು ಅಧ್ಯಕ್ಷತೆ ವಹಿಸುವರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries