ಮಂಜೇಶ್ವರ: ಬಲ್ಲಂಗುಡೇಲ್ ಗೆಳೆಯರ ಬಳಗದ ವತಿಯಿಂದ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ಬಲ್ಲಂಗುಡೇಲು ಪಾಡಂಗರೆ ಭಗವತೀ ಕ್ಷೇತ್ರದ ವಠಾರದಲ್ಲಿ ಇತ್ತೀಚೆಗೆ ಜರಗಿತು.
ಕಳೆದ ಜ.19 ರಂದು ನಡೆದ ಉಚಿತ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಂಡು ಕಣ್ಣಿನ ತಪಾಸಣೆಗೈದವರಿಗೆ ಸಂಘದ ಸರ್ವ ಪದಾಧಿಕಾರಿಗಳ ಸಮ್ಮುಖದಲ್ಲಿ ಕನ್ನಡಕವನ್ನು ವಿತರಿಸವಾಯಿತು. ಸಂಘದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಕರಿಬೈಲ್, ಗೌರವ ಸಲಹೆಗಾರ ಮೂಸಾ ಪಿ.ಅಜ್ಜಿಹಿತ್ಲು, ಸಾಂಸ್ಕøತಿಕ ಕಾರ್ಯದರ್ಶಿ ಪ್ರದಿಪ್ ಶೆಟ್ಟಿ ಬಲ್ಲಂಗುಡೇಲ್, ಕಾರ್ಯದರ್ಶಿ ಆನಂದ ಹೊಸಗದ್ದೆ, ಸಂಘದ ಸದಸ್ಯರಾದ ಆಕಾಶ್ ಹೊಸಗದ್ದೆ, ಜಯರಾಮ ಬಲ್ಲಂಗುಡೇಲ್, ಕಿರಣ್ ಕುಮಾರ್ ಆಳ್ವ ಪಟ್ಟತ್ತಮೊಗರು ಹಾಗು ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.