ಉಪ್ಪಳ: ಚಿಪ್ಪಾರು ಹಿಂದು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ ಜೆ ಶೆಟ್ಟಿಯವರು ಮಾತನಾಡಿ,ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಪ್ರದರ್ಶಿಸಲಿರುವ ಸದವಕಾಶ ಶಾಲಾ ವಾರ್ಷಿಕೋತ್ಸವದಲ್ಲಿದೆ. ರಕ್ಷಕರು ಹಾಗೂ ಶಿಕ್ಷಕರು ಗುಣಾತ್ಮಕವಾಗಿ ಸ್ಪಂದಿಸಿದಾಗ ಮಾತ್ರ ಇಂತಹ ಉತ್ತಮ ಕಾರ್ಯಗಳು ನಡೆಯಲು ಸಾಧ್ಯವಾಗುವುದು. ಎಂದು ಹೇಳಿದರು.
ಶಾಲಾ ಪ್ರಬಂಧಕ ಗಂಗಾಧರ ಬಲ್ಲಾಳ್ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು. ಪೈವಳಿಕೆ ಗ್ರಾಮ ಪಂಚಾಯತಿ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಪಾತಿಮತ್ ಝೌರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿ ಸದಸ್ಯರಾದ ಸುಜಾತ ಬಿ ರೈ, ಚನಿಯ ಕೊಮ್ಮಂಗಳ, ರಝಿಯಾ ರಝಾಕ್, ಅಂದುಞ ಹಾಜಿ ಸಿರಂತಡ್ಕ, ನಿವೃತ್ತ ಕೃಷಿ ಅಧಿಕಾರಿ ತಿರುಮಲೇಶ್ವರ ಭಟ್ ಪೆರ್ಲ, ಬಷೀರ್, ಶಾಲಾ ಆಡಳಿತ ಮಂಡಳಿ ಸದಸ್ಯ ಸೀತಾರಾಮ ಬಲ್ಲಾಳ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್ ಸೋಕೆ, ಉಪಾಧ್ಯಕ್ಷ ಜಯರಾಮ ಅಮ್ಮೇರಿ, ಮಾತೃಮಂಡಳಿ ಅಧ್ಯಕ್ಷೆ ಜಯಶ್ರೀ ಸಿ, ಉಪಾಧ್ಯಕ್ಷೆ ಜಯಲಕ್ಷ್ಮಿ ಕೆ,ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯ ದಾಸಪ್ಪ ಕೆ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಶೇಖರ ಮಾಸ್ತರ್ ಶಾಲಾ ವರದಿ ವಾಚಿಸಿದರು. ಅಧ್ಯಾಪಕರಾದ ಚಂದ್ರಶೇಖರ ಭಟ್ ನಿರೂಪಿಸಿದರು. ಪ್ರೇಮಲತಾ ಟೀಚರ್ ವಂದಿಸಿದರು. ಈ ಸಂದರ್ಭದಲ್ಲಿ ಶಾಲಾ ಅಧ್ಯಾಪಕ ಉಣ್ಣಿಕೃಷ್ಣನ್ ಪಿ.ಪಿ.ಇವರನ್ನು ಗೌರವಾದರಗಳೊಂದಿಗೆ ಬೀಳ್ಕೊಡಲಾಯಿತು. ಬಳಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.