ಕಾಸರಗೋಡು: ಕೂಡ್ಲು ದೇವರಗುಡ್ಡೆಶ್ರೀಶೈಲ ಮಹಾದೇವ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಹಾಗೂ ಅತಿರುದ್ರ ಪಾರಾಯಣದ ಅಂಗವಾಗಿ ಗಣಪತಿ ಹೋಮ, ರುದ್ರಪಾರಾಯಣ, ರುದ್ರಜಪ ಘನಪಾರಾಯಣ, ರುದ್ರಕಲಶ, ರುದ್ರಹೋಮ, ರುದ್ರಜಪ ಸಹಿತ ವಿವಿಧ ವೈದಿಕ ಕಾರ್ಯಕ್ರಮ ಜರುಗಿತು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ತಾಳಮದ್ದಳೆ, ಯೋಗ ನೃತ್ಯ ಪ್ರದರ್ಶನ, ಹರಿಕಥಾ ಸತ್ಸಂಗ ನಡೆಯಿತು. ಈ ಸಂದರ್ಭ ನಡೆದ ಆಚಾರ್ಯರ ಸಮ್ಮೇಳನದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮುಖ್ಯ ಅರ್ಚಕ ಕಟೀಲು ಕಮಲಾದೇವಿ ಪ್ರಸಾದ ಆಸ್ರಣ್ಣ ಸಮ್ಮೇಳನ ಉದ್ಘಾಟಿಸಿದರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅಧ್ಯಕ್ಷತೆ ವಹಿಸಿದ್ದರು. ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣುಭಟ್, ಬ್ರಹ್ಮಶ್ರೀ ಚಕ್ರಪಾಣಿ ದೇವಪೂಜಿತ್ತಾಯ, ಬ್ರಹ್ಮಶ್ರೀ ವಆಸುದೇವ ತಂತ್ರಿ ಕುಂಟಾರು, ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು, ಬ್ರಹ್ಮಶ್ರೀ ಇರುವೈಲ್ ಕೃಷ್ಣದಾಸ್ ತಂತ್ರಿಗಳು, ಬ್ರಹ್ಮಶ್ರೀ ಕಾವುಪಟ್ಟೇರಿ ವಿಷ್ಣುಪ್ರಕಾಶ್ ತಂತ್ರಿಗಳು, ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ವಿದ್ವಾನ್ ನಾಗೇಂದ್ರ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವೈದಿಕ ಕಾರ್ಯಕ್ರಮದನ್ವಯ ಫೆ. 29ರಂದು ಗಣಪತಿ ಹೋಮ, ವಿದ್ಯಾಸರಸ್ವತೀ ಹೋಮ, ರುದ್ರಪಾರಾಯಣ ನಡೆಯುವುದು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ವಿಠಲ ನಾಯ್ಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ, ಯಕ್ಷಗಾನ ತಾಳಮದ್ದಳೆ, ಧಾರ್ಮಿಕ ಸಭೆ ನಡೆಯುವುದು.