ಬದಿಯಡ್ಕ: ಕುಂಬ್ಡಾಜೆ ಅಗಲ್ಪಾಡಿ ನಡುಮನೆ ಪಡಿಪ್ಪುರೆಯಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ಮಹಾವಿಷ್ಣುಮೂರ್ತಿ ದೈವದ ಬಯಲುಕೋಲ ಮಹೋತ್ಸವವು ಗ್ರಾಮದ ಜನರ ಸಹಭಾಗಿತ್ವದಲ್ಲಿ ಶನಿವಾರ ಮೊದಲ್ಗೊಂಡು ಭಾನುವಾರ ಸಂಪನ್ನವಾಯಿತು. ಶನಿವಾರ ಸಂಜೆ ಉಬ್ರಂಗಳ ಶ್ರೀ ಐವರು ವಿಷ್ಣುಮೂರ್ತಿ ಚಾಮುಂಡಿ ದೈವಸ್ಥಾನದಿಂದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಹೊರಟು ಉಬ್ರಂಗಳ ಶ್ರೀ ಮಹಾದೇವ ಸನ್ನಿಗೆ ಭಂಡಾರ ತಲುಪಿದ ಬಳಿಕ ದೇವಾಲಯದಲ್ಲಿ ರಂಗಪೂಜೆ ನಡೆಯಿತು. ಬಳಿಕ ಉಬ್ರಂಗಳ ಅಗಲ್ಪಾಡಿ ಮಾರ್ಗವಾಗಿ ನಡುಮನೆ ಪಡಿಪ್ಪುರೆಗೆ ಆಗಮಿಸಿ ದೈವದ ತೊಡಂಗಲ್, ಅನ್ನದಾನ ನಡೆಯಿತು. ಭಾನುವಾರ ಬೆಳಗ್ಗೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಬಯಲುಕೋಲ ಮಹೋತ್ಸವ, ಅರಸಿನ ಹುಡಿ ಪ್ರಸಾದ ವಿತರಣೆ ಜರಗಿತು. ಊರಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು.
ಶ್ರೀ ಮಹಾವಿಷ್ಣುಮೂರ್ತಿ ದೈವದ ಬಯಲುಕೋಲ
0
ಫೆಬ್ರವರಿ 17, 2020