ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕಿ ರೂಪಶ್ರೀ ಬಿ.ಕೆ. ಅವರ ಹತ್ಯೆಯಲ್ಲಿ ಶಾಮೀಲಾಗಿರುವ ಎಲ್ಲಾ ಆರೋಪಿಗಳನ್ನೂ ಬಂಧಿಸಬೇಕು. ಹಂತಕರಿಗೆ ಗರಿಷ್ಠ ಶಿಕ್ಷೆ ನೀಡಬೇಕು ಎಮದು ಒತ್ತಾಯಿಸಿ ಕೇರಳ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್(ಕೆಎಸ್‍ಟಿಎ)ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸೋಮವಾರ ಹೊಸಂಗಡಿಯಲ್ಲಿ ಜಾಗೃತಿ ಸಮಾವೇಶ ಆಯೋಜಿಸಲಾಗಿತ್ತು.
ಮಾಜಿ ಶಾಸಕ ನ್ಯಾಯವಾದಿ ಸಿ.ಎಚ್.ಕುಂಞಂಬು ಸಮಾವೇಶವನ್ನು ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ರೂಪಶ್ರೀ ಟೀಚರ್ ಅವರ ಬರ್ಬರ ಹತ್ಯೆ ಶಿಕ್ಷಣ ವಲಯದಲ್ಲೇ ಕಂಡು ಕೇಳಿ ಅರಿಯದ ಭೀಭತ್ಸ ಘಟನೆಯಾಗಿದ್ದು ಸಮಗ್ರ ತನಿಖೆ ಮತ್ತು ನ್ಯಾಯಾಲಯದಲ್ಲಿ ಹೋರಾಟ ನಡೆಸುವ ಮೂಲಕ ನ್ಯಾಯ ದೊರಕಿಸಬೇಕು. ಇನ್ನಾರಿಗೂ ಇಂತಹ ದುರ್ಗತಿ ಉಂಟಾಗದಂತೆ ನಾಗರಿಕರು ಜಾಗೃತರಾಗಬೇಕು ಎಂದು ಕರೆನೀಡಿದರು.
ಎ.ಆರ್.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕೆಎಸ್‍ಟಿಎ ರಾಜ್ಯ ಉಪಾಧ್ಯಕ್ಷ ಕೆ.ರಾಘವನ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಸಿ.ಶಾಂತಕುಮಾರಿ, ಕೆ.ಹರಿದಾಸ್, ಪಿ.ರವೀಂದ್ರನ್, ಬಾಲಮಣಿ, ಟಿ.ಪ್ರಕಾಶನ್, ವಿಷ್ಣುಪಾಲ ಬಿ., ಸುಜಾತ ಕೆ.ವಿ., ರಾಜೇಶ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ದಿಲೀಪ್ ಕುಮಾರ್ ಸ್ವಾಗತಿಸಿ, ಜಿಲ್ಲಾ ಜೊತೆ ಕಾರ್ಯದರ್ಶಿ ಶ್ಯಾಂ ಭಟ್ ವಂದಿಸಿದರು.