ಮಂಜೇಶ್ವರ: ಯುವಮೋರ್ಚಾ ಮಿಂಜ ಪಂಚಾಯತಿ ಸಮಿತಿ ನೇತೃತ್ವದಲ್ಲಿ ದಿ. ಜಯಪ್ರಕಾಶ್ ಆಳ್ವ ಸ್ಮರಣಾರ್ತ ಕಬಡ್ಡಿ ಪಂದ್ಯಾಟ ಮೀಯಪದವು ವಿನಲ್ಲಿ ಭಾನುವಾರ ಜರಗಿತು.
ಕಾರ್ಯಕ್ರಮವನ್ನು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಮಣಿಕಂಠ ರೈ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕ್ರೀಡೆಗಳು ಶಾರೀರಿಕ ಕ್ಷಮತೆಯನ್ನು ಉಂಟುಮಾಡುವುದರ ಜೊತೆಗೆ ಬೌದ್ದಿಕ ವಿಕಾಸಕ್ಕೂ ಕಾರಣವಾಗುತ್ತದೆ. ಭಾರತೀಯ ಸಾಂಪ್ರದಾಯಿಕತೆಯ ಗ್ರಾಮೀಣ ಕ್ರೀಡೆಗಳು ಸಮಗ್ರ ಸಮಾಜದ ಸುಸ್ಥಿರ ಸಮತೋಲನಕ್ಕೆ ಪ್ರೇರಣೆ ನೀಡುವ ವಿಶಿಷ್ಟತೆ ಹೊಂದಿರುವ ಕ್ರೀಡೆಗಳಾಗಿವೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಮಿಂಜ ಪಂಚಾಯತಿ ಯುವಮೋರ್ಚಾ ಘಟಕದ ಅಧ್ಯಕ್ಷ ವಿಘ್ನೇಶ್ ವಹಿಸಿದ್ದರು. ಸಭೆಯಲ್ಲಿ ಬಿಜೆಪಿ ನೇತಾರರಾದ ಕೃಷ್ಣ ನಾವಡ, ನಾರಾಯಣ ನ್ಯಾಯ್ಕ್, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸಂತೋಷ ದೈಗೋಳಿ, ಶಿವಪ್ರಸಾದ್, ಸಂಘದ ಹಿರಿಯರಾದ ತಿಮ್ಮಪ್ಪ ಮೊದಲಾದವರು ಉಪಸ್ಥಿತರಿದ್ದರು.