ಸ್ಯಾನ್ ಫ್ರಾನ್ಸಿಸ್ಕೋ: ಪ್ರಸಿದ್ದ ವೀಡಿಯೋ ಮೇಕಿಂಗ್ ಅಪ್ಲಿಕೇಷನ್ ಟಿಕ್ ಟಾಕ್ ಗೆ ತಾಂಗ್ ನೀಡಲು ವಿಶ್ವದ ಅತಿದೊಡ್ದ ಸರ್ಚ್ ಇಂಜಿನ್ ಸಂಸ್ಥೆ ಗೂಗಲ್ ಸಿದ್ದವಾಗಿದೆ. ಇದೀಗ ಗೂಗಲ್ ಹೊಸ ಪ್ರಯೋಗಶಾಲೆ ಟ್ಯಾಂಗಿ ಎನ್ನುವ ಕಿರು ಅವಧಿಯ ವೀಡಿಯೋ ಅಪ್ಲಿಕೇಷನ್ ಬಿಡುಗಡೆ ಮಾಡಿದೆ.
ಪ್ರಸ್ತುತ ಪ್ರಯೋಗಾತ್ಮಕ ಅಪ್ಲಿಕೇಷನ್ ಆಗಿದ್ದು ಟ್ಯಾಂಗಿ ಪದವನ್ನು The words TeAch and Give ನಿಂದ ಸೃಷ್ಟಿಸಲಾಗಿದೆ. ಈ ಅಪ್ಲಿಕೇಷನ್ ನಲ್ಲಿ ಯಾವುದೇ 60 ಸೆಕೆಂಡ್ ಅವಧಿಯ ವೀಡಿಯೋ ಅಪ್ ಮಾಡಬಹುದಾಗಿದೆ. ್ಯ ಈ ಅಪ್ಲಿಕೇಷನ್ ಐಒಎಸ್ ನಲ್ಲಿ ಮಾತ್ರವೇ ಲಭ್ಯವಿದ್ದು ಆಂಡ್ರಾಯ್ಡ್ ಬಳಕೆದಾರರಿಗೆ ದೊರಕುವುದಿಲ್ಲ.
ಟಿಕ್‍ಟಾಕ್‍ನ ಯಶಸ್ಸಿನ ನಂತರ, ಕಿರು-ವೀಡಿಯೊ ಅಪ್ಲಿಕೇಶನ್‍ಗಳನ್ನು ಪ್ರಾರಂಭಿಸುವಲ್ಲಿ ಸ್ಪರ್ಧೆಗಳೇರ್ಪಟ್ಟಿದೆ. ಟಿಕ್‍ಟಾಕ್‍ನ ಹೊರತಾಗಿ ಇದೀಗ ಫೇಸ್‍ಬುಕ್ ಒಡೆತನದ ಇನ್‍ಸ್ಟಾಗ್ರಾಮ್ "ರೀಲ್ಸ್"(Reels) ಎಂಬ ಹೊಸ ವಿಡಿಯೋ-ಮ್ಯೂಸಿಕ್ ರೀಮಿಕ್ಸ್ ಫೀಚರ್ ಅನ್ನು ಪರಿಚಯಿಸಿದೆ."ರೀಲ್ಸ್" ಬಳಕೆದಾರರಿಗೆ 15 ಸೆಕೆಂಡುಗಳ ವೀಡಿಯೊ ತುಣುಕುಗಳನ್ನು ಸಂಗೀತಕ್ಕೆ ಹೊಂದಿಸಲು ಮತ್ತು ಅವುಗಳನ್ನು ಸ್ಟೋರಿಯಾಗಿ ಹಂಚಿಕೊಳ್ಲಲು ಅವಕಾಶವಿದೆ.
ಕಳೆದ ವರ್ಷ ನವೆಂಬರ್‍ನಲ್ಲಿ ಫೇಸ್‍ಬುಕ್ ಸದ್ದಿಲ್ಲದೆ ಟಿಕ್‍ಟಾಕ್‍ನೊಂದಿಗೆ ಸ್ಪರ್ಧಿಸಲು "ಲಾಸ್ಸೊ"(Lasso) ಎಂಬ ಸ್ಟ್ಯಾಂಡ್-ಅಲೋನ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿತು.