HEALTH TIPS

ಪೇರಾಲು ಶಾಲಾ ವಧರ್ಂತ್ಯುತ್ಸವ

   
         ಕುಂಬಳೆ: ನಾಡಿನ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಕೇಂದ್ರವಾಗಿ ಬೆಳೆದುಬರುತ್ತಿರುವ ಪೇರಾಲು ಸರ್ಕಾರಿ ಕಿರಿಯ ಬುನಾದಿ ಶಾಲೆಯು ಮುಂದಿನ ವರ್ಷಗಳಲ್ಲಿ ನಾಡಿಗೆ ಮಾದರಿಯಾಗುವಂತಹ ಇನ್ನಷ್ಟು ಕೆಲಸಗಳನ್ನು ಮಾಡುವಂತಾಗಲಿ ಎಂದು ಕಾಸರಗೋಡು ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಜಿಸಿ ಬಶೀರ್ ಅಭಿಪ್ರಾಯ ವ್ಯಕ್ತಪಡಿಸಿದರು.
          ಪೇರಾಲು ಶಾಲಾ ವಧರ್ಂತ್ಯುತ್ಸವವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
     ಸರ್ಕಾರಿ  ಶಾಲೆಗಳ ಏಳುಬೀಳುಗಳು ಊರವರ ಮತ್ತು ಶಿಕ್ಷಕರ ಕೈಯಲ್ಲಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಈ ಶಾಲೆಯಾಗಿದೆ. ಊರವರ ನಿರಂತರ ಶ್ರಮದ ಫಲವಾಗಿ ಒಂದು ಕೋಟಿ ರೂ. ಯೋಜನೆ ಸಾಕಾರಗೊಳ್ಳುವ ಹಂತದಲ್ಲಿರುವುದಲ್ಲದೆ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಡಿಸಬೇಕೆಂಬ ಊರವರ ಬಲವಾದ ಆಗ್ರಹಕ್ಕೆ ಸಾಕಷ್ಟು ಪುಷ್ಠಿ ನೀಡುತ್ತದೆ ಎಂದು ಅವರು ಹೇಳಿದರು.
        ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಪುಂಡರೀಕಾಕ್ಷ ಕೆ ಎಲ್ ಅಧ್ಯಕ್ಷತೆ ವಹಿಸಿದ ಉದ್ಘಾಟನ ಕಾರ್ಯಕ್ರದಲ್ಲಿ ಕುಂಬಳೆ ಗ್ರಾಮ ಪಂಚಾಯತಿಯ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಆರಿಫ್ ಎಕೆ ಮತ್ತು ಕುಂಬಳೆ ಗ್ರಾಮ ಪಂಚಾಯತಿ ಸದಸ್ಯ ವಿಪಿ ಆಬ್ದಲ್ ಖಾದರ್ ಹಾಜಿ ಮುಖ್ಯ ಅತಿಥಿಗಳಾಗಿದ್ದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಶುಭಹಾರೈಸಿದರು. ಮೊಯ್ದೀನ್ ಕೆ.ಕೆ, ಚಂದ್ರಿಕಾ ಮೊಹಮ್ಮದ್, ಫಝಲ್ ಪಾರ, ಜಗದೀಶ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉತ್ತಮ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರೆಂಬ ನೆಲೆಯಲ್ಲಿ ಮೊಹಮ್ಮದ್ ಬಿ.ಎ ಪೇರಾಲು ಅವರಿಗೆ ಮುಸ್ಲಿಂ ಲೀಗ್ ಪೇರಾಲು ಘಟಕ ಕೊಡಮಾಡಿದ ಸ್ಮರಣಿಕೆಯನ್ನು ಎ.ಜಿ.ಸಿ. ಬಶೀರ್ ಅವರು ನೀಡಿ ಗೌರವಿಸಿದರು. ಉದ್ಘಾಟನ ಸಮಾರಂಭದ ಬಳಿಕ  ನಾಲ್ಕೈದು ರಾಜ್ಯಗಳಲ್ಲಿ ಯಕ್ಷಗಾನ ಕಲೆಯ ಕಂಪನ್ನು ಬೀರಿದ ಕಲಾವಿದೆ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಹಿರಿಯ ಮಾಧ್ಯಮಿಕ ಶಾಲಾ ವಿದ್ಯಾರ್ಥಿನಿ ಸುಪ್ರೀತಾ ಸುಧೀರ್ ರೈ ಮುಳ್ಳೇರಿಯ ಪ್ರಸ್ತುತಪಡಿಸಿದ ಏಕವ್ಯಕ್ತಿ ಯಕ್ಷಗಾನ, ಶಾಲೆಯ ವಿಶೇಷ ಚೇತನ ಮಕ್ಕಳೂ ಸಹಿತ ಎಲ್ಲ ಮಕ್ಕಳಿಂದ ನೃತ್ಯ ಹಾಗೂ ಶಿಕ್ಷಕಿಯರಿಂದ ನೃತ್ಯ ಕಾರ್ಯಕ್ರಮ ಜರಗಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries