ಚೆನ್ನೈ: ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿನ ಪುರಾತನ ಪ್ರಸಿದ್ದ ದೇಗುಲದಲ್ಲಿ ಚಿನ್ನದ ನಾಣ್ಯಗಳು ಪತ್ತೆಯಾಗಿದೆ.
ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ತಿರುವನೈಕಾವಲ್ ಜಂಬುಕೇಶ್ವರ ದೇವಸ್ಥಾನದಲ್ಲಿ ಈ ನಿಧಿ ಪತ್ತೆಯಾಗಿದ್ದು, ದೇಗುಲದ ಆವರಣದಲ್ಲಿ ನೆಲ ಅಗೆಯುತ್ತಿದ್ದಾಗ 505 ಚಿನ್ನದ ನಾಣ್ಯಗಳು ದೊರೆತಿವೆ. ಮೂಲಗಳ ಪ್ರಕಾರ ಲೋಹ ಪಾತ್ರೆಯೊಂದರಲ್ಲಿ ಈ ಚಿನ್ನದ ನಾಣ್ಯಗಳು ದೊರೆತಿದೆ. ಅಧಿಕಾರಿಗಳು ಈ ನಾಣ್ಯಗಳನ್ನು ಲೆಕ್ಕಹಾಕಿದಾಗ ಒಟ್ಟು 505 ನ್ಯಾಣಗಳು ದೊರೆತಿವೆ ಎನ್ನಲಾಗಿದೆ. ಇವುಗಳ ಒಟ್ಟಾರೆ ತೂಕ 1, 716 ಗ್ರಾಂ ಎಂದು ತಿಳಿದುಬಂದಿದ್ದು, ಇವುಗಳ ಪ್ರಸ್ತುತ ಮಾರುಕಟ್ಟೆ ದರ ಸುಮಾರು 68 ಲಕ್ಷ ರೂ ಇರಬಹುದು ಎನ್ನಲಾಗಿದೆ.
ನಾಣ್ಯಗಳ ಮೇಲೆ ಅರೇಬಿಕ್ ಲಿಪಿಯ ಅಕ್ಷರವಿರುವುದರಿಂದಾಗಿ ಇದು ಕ್ರಿ.ಶ 1000-1200ರ ಕಾಲದ್ದಿರಬಹುದು ಎಂದು ಅಂದಾಜಿಸಲಾಗಿದೆ.ದೇಗುಲದ ಆಡಳಿತ ಮಂಡಳಿ ದೇಗುಲದ ಆವರಣದಲ್ಲಿ ಹೂವಿನ ತೋಟ ನಿರ್ಮಾಣ ಮಾಡಲು ಜೀರ್ಣೋದ್ಧಾರ ಕೆಲಸ ಆರಂಭಿಸಿದಾಗ ಪಾತ್ರೆಯೊಂದರಲ್ಲಿ ಸಣ್ಣ ಸಣ್ಣ ಗಾತ್ರದ ನಾಣ್ಯಗಳು ಇರುವುದು ಕಂಡು ಬಂತು. ವಿಷಯ ತಿಳಿದ ಕೂಡಲೆ ಪೆÇಲೀಸರು ಸ್ಥಳಕ್ಕೆ ಧಾವಿಸಿ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಅಂತೆಯೇ ನಾಣ್ಯಗಳನ್ನು ಮತ್ತು ಅವು ಪತ್ತೆಯಾದ ಜಾಗವನ್ನು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ಪೆÇಲೀಸರಿಗೆ ಹಸ್ತಾಂತರಿಸಿದೆ. ಹೆಚ್ಚಿನ ತನಿಖೆಗಾಗಿ ನಾಣ್ಯಗಳನ್ನು ಖಜಾನೆಯಲ್ಲಿಡಲಾಗಿದೆ.
ನಾಣ್ಯಗಳು ಪತ್ತೆಯಾದ ಅಖಿಲಾಂಡೇಶ್ವರಿ ಸಮೇಧಾ ಜಂಬುಕೇಶ್ವರ ದೇವಸ್ಥಾನವನ್ನು 1800ರಲ್ಲಿ ನಿರ್ಮಾಣ ಮಾಡಿರಬಹುದು. ಅಂದಿನ ದೊರೆ ಚೋಳರ ರಾಜ ಕೊಚ್ಚೆಂಗನ್ನನ್ ಈ ದೇಗುಲವನ್ನು ಕಟ್ಟಿಸಿದ್ದ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
Tamil Nadu: 505 gold coins weighing 1.716 kg found in a vessel during digging at Jambukeswarar Temple in Thiruvanaikaval, Tiruchirappalli district yesterday. Coins were later handed over to the police.
1,685 people are talking about this