ತಿರುವನಂತಪುರಂ: ಕೇರಳ ಸರ್ಕಾರ 2020-21ನೇ ಸಾಲಿನ ಆಯ ವ್ಯವಯವನ್ನು ನಿನ್ನೆ ಮಂಡಿಸಿದ್ದು, ಬಜೆಟ್ ಪ್ರತಿಯ ಮುಖಪುಟದಲ್ಲಿ ಗಾಂಧಿ ಹತ್ಯೆಯ ಚಿತ್ರವಿರುವುದು ಗಮನದ ಕೇಂದ್ರಬಿಂದುವಾಗಿತ್ತು.
ಸಚಿವ ಥಾಮಸ್ ಐಸಾಕ್ ಈ ಕುರಿತು ಸ್ಪಷ್ಟನೆ ನೀಡಿದ್ದು, ಹೌದು, ಇದು ರಾಜಕೀಯ ಉದ್ದೇಶದಿಂದಲೇ ಮಾಡಲಾಗಿದೆ ಎಂದು ಹೇಳಿದ್ದಾರೆ. ಕೇರಳ ಬಜೆಟ್ ಪ್ರತಿಯ ಮುಖಪುಟದ ಚಿತ್ರ ಖಂಡಿತವಾಗಿಯೂ ಇದು ರಾಜಕೀಯ ಉದ್ದೇಶವೇ. ಮಹಾತ್ಮಾ ಗಾಂಧಿಯ ಹತ್ಯೆಯ ಸನ್ನಿವೇಶವನ್ನು ಮಳಯಾಳಂ ಕಲಾವಿದ ರಚಿಸಿದ್ದಾರೆ. ನಾವು ಮಹಾತ್ಮಾ ಗಾಂಧಿ ಅವರನ್ನು ಹತ್ಯೆ ಮಾಡಿದವರು ಯಾರು ಎಂಬುದನ್ನು ಮರೆಯುವುದಿಲ್ಲ.
ಇತಿಹಾಸವನ್ನು ಪುನಃ ರಚನೆಮಾಡಲಾಗುತ್ತಿದೆ. ಎನ್ ಆರ್ ಸಿಯನ್ನು ಧರ್ಮದ ಆಧಾರದಲ್ಲಿ ದೇಶ ವಿಭಜನೆಗಾಗಿ ಬಳಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದಿನ ಮುಖಪುಟ ಮಹತ್ವ ಪಡೆಯುತ್ತದೆ. ಕೇರಳ ಒಗ್ಗಟ್ಟಿನಿಂದ ಇರುತ್ತದೆ ಎಂದು ಥಾಮಸ್ ಐಸಾಕ್ ಹೇಳಿದ್ದಾರೆ.