ನವದೆಹಲಿ: ಭಾರತಿ ಏರ್ ಟೆಲ್ 10 ಸಾವಿರ ಕೋಟಿ ರೂ. ಬಾಕಿ ಹಣ ಪಾವತಿಸಿದ ಬೆನ್ನಲ್ಲೇ, ವೋಡಾಫೆÇೀನ್ ಐಡಿಯಾ ಮತ್ತು ಟಾಟಾ ಟೆಲಿ ಸರ್ವೀಸಸ್ ಕಂಪನಿಗಳು ಕೂಡಾ ಅಲ್ಪ ಬಾಕಿ ಹಣವನ್ನು ಪಾವತಿಸಿವೆ.
ವೋಡಾಫೆÇೀನ್ ಐಡಿಯಾ 2, 500 ಕೋಟಿ ಹಾಗೂ ಟಾಟಾ ಗ್ರೂಫ್ 2, 190 ಕೋಟಿ ರೂಪಾಯಿಯನ್ನು ದೂರಸಂಪರ್ಕ ಇಲಾಖೆಗೆ ಪಾವತಿ ಮಾಡಿವೆ ಎಂದು ಸರ್ಕಾರದ ಅಧಿಕಾರಿಯೊಬ್ಬರು ನಿನ್ನೆ ತಿಳಿಸಿದ್ದಾರೆ. ವೋಡಾಫೆÇೀನ್ ಐಡಿಯಾ ಕಂಪನಿಯು, 28 ಸಾವಿರದ 309 ಕೋಟಿ ರೂ. ಪರವಾನಗಿ ಶುಲ್ಕ ಹಾಗೂ 24, 729 ಕೋಟಿ ಸ್ಪೆಕ್ಟ್ರಮ್ ಶುಲ್ಕ ಬಾಕಿ ಸೇರಿದಂತೆ ಒಟ್ಟಾರೇ, 53,000 ಕೋಟಿ ರೂ. ಬಾಕಿಯನ್ನು ಪಾವತಿಸಬೇಕಾಗಿದೆ. ಸುಪ್ರೀಂಕೋರ್ಟ್ ಖಡಕ್ ಸೂಚನೆ ನಂತರ ಫೆಬ್ರವರಿ 20 ರೊಳಗೆ 10 ಸಾವಿರ ಕೋಟಿ ರೂಪಾಯಿಯನ್ನು ಪಾವತಿಸುತ್ತೇವೆ ಎಂದು ಏರ್ ಟೆಲ್ ಟೆಲಿಕಾಂ ಇಲಾಖೆಗೆ ಹೇಳಿತ್ತು. ಉಳಿದ ಹಣವನ್ನು ಮಾರ್ಚ್ 17 ರೊಳಗೆ ಕಟ್ಟುವ ಭರವಸೆ ನೀಡಿತ್ತು. ಅದರಂತೆ ಇಂದು ಭಾರತಿ ಏರ್ ಟೆಲ್ ಹಾಗೂ ಭಾರತಿ ಹೆಕ್ಸಾಕಾಮ್ ಪರವಾಗಿ ಏರ್ ಟೆಲ್ 10 ಸಾವಿರ ಕೋಟಿ ಹಣ ಪಾವತಿ ಮಾಡಿದೆ. ಒಂದು ಲೆಕ್ಕಾಚಾರದ ಪ್ರಕಾರ ಏರ್ ಟೆಲ್ ಲೆಸೆನ್ಸ್ ಫೀಸ್, ಸ್ಪೆಕ್ಟ್ರಂ ಚಾರ್ಜ್ ಸೇರಿದಂತೆ ಒಟ್ಟು 35 ಸಾವಿರದ 586 ಕೋಟಿ ರೂ ಹಣವನ್ನು ಟೆಲಿಕಾಂ ಇಲಾಖೆಗೆ ಕಟ್ಟಬೇಕಿದೆ. ಉಳಿದ ಹಣವನ್ನು ಮುಂದಿನ ಸುಪ್ರೀಂಕೋರ್ಟ್ ವಿಚಾರಣೆಯೊಳಗೆ ಕಟ್ಟುವುದಾಗಿ ಏರ್ ಟೆಲ್ ತಿಳಿಸಿದೆ.
ಫೆಬ್ರವರಿ 14 ರಂದು ಸುಪ್ರೀಂಕೋರ್ಟ್ ಚಾಟಿ ಬೀಸುತ್ತಿದ್ದಂತೆ ಎಚ್ಚೆತ್ತುಕೊಂಡ ಟೆಲಿ ಕಮ್ಯುನಿಕೇಷನ್ ಇಲಾಖೆ (ಡಿಒಟಿ) ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜೆಆರ್ ) 1. 47 ಲಕ್ಷ ಕೋಟಿ ರೂಪಾಯಿಯನ್ನು ಫೆ.15ರ ರಾತ್ರಿ 12 ಗಂಟೆಯೊಳಗೆ ಪಾವತಿಸುವಂತೆ ದೇಶದ ಟೆಲಿಕಾಂ ಕಂಪನಿಗಳಿಗೆ ಸೂಚಿಸಿತ್ತು.