ಕುಂಬಳೆ: ಶತಮಾನಗಳಷ್ಟು ಹಳೆಯ ಕೇರಳದ ಮ್ಯೂರಲ್ ಪೇಂಟಿಂಗ್ (ಭಿತ್ತಿಚಿತ್ರ) ಸಂಪ್ರದಾಯವು ಯಕ್ಷಗಾನದ ಸೌಂದರ್ಯವನ್ನು ಹೀರಿಕೊಳ್ಳಲು ಅದರ ವರ್ಣರಂಜಿತ ಕ್ಯಾನ್ವಾಸ್ ಅನ್ನು ವಿಸ್ತರಿಸಿದೆ.
ಕಾಸರಗೋಡು ಮೂಲದ 30 ವರ್ಷಗಳ ಹಳೆಯ ಸಾಂಸ್ಕøತಿಕ ಸಂಘಟನೆಯಾದ ಪೆÇೀಕ್ ಲ್ಯಾಂಡ್ ಸಂಸ್ಥೆಯು ಡಾರ್ಫ್ ಕೆಟಾಲ್ ಸಂಸ್ಥೆಯ ಬೆಂಬಲದೊಂದಿಗೆ ಕೇರಳದ ಸಾಂಪ್ರದಾಯಿಕ ವರ್ಣಚಿತ್ರವನ್ನು ಕರ್ನಾಟಕಕ್ಕೆ ಹರಡಲು ಪ್ರಪ್ರಥಮವಾಗಿ ಗುಣವಂತೆಯ ಯಕ್ಷಾಂಗಣದಲ್ಲಿ ಭಿತ್ತಿಚಿತ್ರ ಕಾರ್ಯಾಗಾರವನ್ನು ನಡೆಸಿತು. ಇಡಗುಂಜಿಯ ಕೆರೆಮನೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ "ಯಕ್ಷಕಲಾ" ಶೀರ್ಷಿಕೆಯಡಿಯಲ್ಲಿ ನಡೆದ ನಾಲ್ಕು ದಿನಗಳ ಈ ಕಾರ್ಯಾಗಾರವನ್ನು ಭಾನುವಾರ ಕೇರಳದ ಕಣ್ಣೂರಿನಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಗೋಡೆಗಳ ಮೇಲೆ ಬೃಹತ್ ಮ್ಯೂರಲ್ ಪೇಂಟಿಂಗ್ ಮಾಡಿರುವ ಖ್ಯಾತ ಮ್ಯೂರಲ್ ವರ್ಣಚಿತ್ರಕಾರ ಕೆ.ಆರ್.ಬಾಬು ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಫೆÇೀಕ್ಲ್ಯಾಂಡ್ ಅಧ್ಯಕ್ಷ ಡಾ.ವಿ.ಜಯರಾಜನ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅನಂತ ಹೆಗಡೆ, ಶ್ರೀಧರ ಹೆಗಡೆ, ಎಂ.ಆರ್.ಹೆಗಡೆ, ಕಾರ್ಯಾಗಾರದ ಪ್ರಮುಖ ಕಲಾವಿದರು ಪ್ರದೀಶ್ ಮೆಲೂರ್, ರಂಜಿತ್ ಅರಿಯಿಲ್, ಶಬರೀಶನ್, ಮಿಥುನ್‍ಬಾಬು, ಶಿಬು ರಾಜ್, ರಾಕೇಶ್ ರಾಮಚಂದ್ರನ್ ಮೊದಲಾದವರು ಉಪಸ್ಥಿತರಿದ್ದರು. ಯಕ್ಷಗಾನ ಚಿತ್ರಗಳ ಪ್ರದರ್ಶನ ಫೆ. 20 ರಂದು ನಡೆಯಲಿದೆ. ಕೆರೆಮನೆ ಶಿವಾನಂದ ಹೆಗಡೆ ಕಲಾವಿದರನ್ನು ಸ್ವಾಗತಿಸಿ, ವಂದಿಸಿದರು.