ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ಕು ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಶರ್ಮಾರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿದ್ದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾನೆ.
ಶರ್ಮಾ, ತಮ್ಮ ಸಲಹೆಗಾರ ಎ ??ಪಿ ಸಿಂಗ್ ಮೂಲಕ, ನ್ಯಾಯಾಲಯದ ಕಟಕಟೆ ಏರಿದ್ದು ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವಂತೆ ಕೋರಿದ್ದಾನೆ. ಈ ಮುನ್ನ ಫೆಬ್ರವರಿ 1 ರಂದು ರಾಷ್ಟ್ರಪತಿ ಕೋವಿಂದ್ ವಿನಯ್ ಮನವಿಯನ್ನು ತಿರಸ್ಕರಿಸಿದ್ದರು.ಈ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮರಣದಂಡನೆಯನ್ನು ಚಾರಣಾ ನ್ಯಾಯಾಲಯ ಜನವರಿ 31 ರಂದು ತಡೆಹಿಡಿದಿತ್ತು
ದಿನದ ಪ್ರಾರಂಭದಲ್ಲಿ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನಾಲ್ವರು ನಿರ್ಭಯಾ ಅಪರಾಧಿಗಳ ಪ್ರತಿಕ್ರಿಯೆ ಕೋರಿ ನೊಟೀಸ್ ಜಾರಿ ಮಾಡಿತ್ತು.