HEALTH TIPS

ರಾಜೀವ್ ಬನ್ಸಾಲ್ ಏರ್ ಇಂಡಿಯಾದ ನೂತನ ವ್ಯವಸ್ಥಾಪಕ ನಿರ್ದೇಶಕ!

 
       ನವದೆಹಲಿ: ಕೇಂದ್ರ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ನೂತನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಹಿರಿಯ ಐ ಎ ಎಸ್ ಅಧಿಕಾರಿ ರಾಜೀವ್ ಬನ್ಸಾಲ್ ಅವರನ್ನು ನೇಮಕ ಮಾಡಲಾಗಿದೆ.
   1998 ನೇ ಬ್ಯಾಚ್ ಐ ಎ ಎಸ್ ಅಧಿಕಾರಿ ಬನ್ಸಾಲ್ ಪ್ರಸ್ತುತ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಏರ್ ಇಂಡಿಯಾ ಮುಖ್ಯಸ್ಥರಾಗಿ ಬನ್ಸಾಲ್ ನೇಮಕಕ್ಕೆ ಸಂಪುಟ ನೇಮಕ ಸಮಿತಿ ಗುರುವಾರ ಅನುಮೋದನೆ ನೀಡಿದೆ.2019 ರ ಫೆಬ್ರವರಿ 13 ರಂದು ಎರಡನೇ ಬಾರಿಗೆ ಮುಖ್ಯಸ್ಥರಾಗಿ ಅಶ್ವಾನಿ ಲೋಹಾನಿ ನೇಮಕವಾಗಿದ್ದರು. ಇದೀಗ ಬನ್ಸಾಲ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
       ಏರ್ ಇಂಡಿಯಾದಿಂದ ಬಂಡವಾಳ ಹಿಂತೆಗೆತದ ಪ್ರಕ್ರಿಯೆ ನಡುವೆಯೂ ಉನ್ನತ ಹುದ್ದೆಗಳಲ್ಲಿ ಬದಲಾವಣೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries