ದೆಹಲಿ: ತೆರಿಗೆ ಸುಧಾರಣೆ ಮಂತ್ರ ಪಠಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಆದಾಯ ತೆರಿಗೆ ಕಡಿತ ಘೋಷಿಸುವುದರ ಮೂಲಕ ಮಧ್ಯಮ ವರ್ಗದವರಿಗೆ ಬಂಪರ್ ಆಫರ್ ನೀಡಿದ್ದಾರೆ. ತೆರಿಗೆ ಪಾವತಿ ವಿಧಾನ ಸರಳಗೊಳಿಸಿದ್ದಾರೆ.
2.5 ಲಕ್ಷದ ವರೆಗೆ ಆದಾಯ ತೆರಿಗೆಯಿಲ್ಲ ಆದರೆ 2.5 ರಿಂದ 5 ಲಕ್ಷದ ವರೆಗೆ ಶೇಕಡ 5 ರಷ್ಟು ತೆರಿಗೆ ಕೊಡಬೇಕಾಗುತ್ತದೆ. 5 ರಿಂದ 7.5 ಲಕ್ಷದವರೆಗೆ ಶೇ. 10ರಷ್ಟು ತೆರಿಗೆ, 7.5ರಿಂದ 10 ಲಕ್ಷದವರೆಗೆ ಶೇ.15ರಷ್ಟು ತೆರಿಗೆ, 10 ರಿಂದ 12.5ರವರೆಗೆ ಶೇ.20ರಷ್ಟು ತೆರಿಗೆ , 12.5ರಿಂದ 15 ಲಕ್ಷದವರೆಗೆ ಶೇ. 25ರಷ್ಟು ತೆರಿಗೆ, 15 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇ. 30ರಷ್ಟು ತೆರಿಗೆ ವಿಧಿಸಿದ್ದಾರೆ.ತೆರಿಗೆದಾರರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಕ್ರಮ ಕೈಗೊಳ್ಳಲು ನಿರ್ದರಿಸಿದ್ದು ರಾಷ್ಟ್ರೀಯ ನೇಮಕಾತಿ ಏಜೆನ್ಸಿ ಸ್ಥಾಪನೆ ಮಾಡಿರುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.ಉತ್ಪಾದನಾ ವಲಯದಲ್ಲಿ ಕಾಪೆರ್Çೀರೇಟ್ ತೆರಿಗೆ ಶೇ.15ರಷ್ಟು ಇಳಿಕೆ ಮಾಡಿದೆ. ಇದರಿಂದ ಹೊಸದಾಗಿ ಹೂಡಿಗೆ ಮಾಡುವ ಕಂಪನಿಗಳಿಗೆ ರಿಲೀಫ್ ಸಿಕ್ಕಂತಾಗಿದೆ.
ಹೊಸ ಆದಾಯ ತೆರಿಗೆ ನೀತಿ ಜಾರಿಗೆ ತರಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ವೈಯಕ್ತಿಕ ತೆರಿಗೆ ಆದಾಯದಿಂದ 40 ಸಾವಿರ ಕೋಟಿ ರೂಪಾಯಿ ನಿರೀಕ್ಷೆ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಈ ಸಂದರ್ಭದಲ್ಲಿ ಹೇಳಿದರು.